ಚಿತ್ರದುರ್ಗ:ಕೊರೊನಾದಿಂದ ಸಾಕಷ್ಟು ಖಾಸಗಿ ಶಾಲೆಯ ಶಿಕ್ಷಕ ಹಾಗು ಶಿಕ್ಷಕಿಯರ ಬದುಕು ಮೂರಾಬಟ್ಟೆಯಾಗಿದೆ. ಇದರ ಸಾಲಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅರೆಹಳ್ಳಿ ಗ್ರಾಮದ ನಿವಾಸಿ ಮಧು ಖಾಸಗಿ ಶಾಲೆಯ ಅಥಿತಿ ಶಿಕ್ಷಕಿ ಕೂಡ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ.
ಖಾಸಗಿ ಶಾಲೆಗಳು ತೆರೆಯದ ಕಾರಣ ಶಿಕ್ಷಕಿ ಮಧು ಎಂಬುವವರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇದರೊಂದಿಗೆ ತನ್ನ ಕ್ಯಾನ್ಸರ್ ಪೀಡಿತೆ ತಾಯಿಯನ್ನು ಉಳಿಸಿಕೊಳ್ಳಲು ಮಧು ಹರಸಾಹಸ ಪಡುತ್ತಿದ್ದಾರೆ. ತಾಯಿಯ ಚಿಕಿತ್ಸೆಗಾಗಿ ಹಣವಿಲ್ಲದೆ ಸಹಾಯಕ್ಕಾಗಿ ಕಾದು ಕೂತಿದ್ದಾರೆ.