ಚಿತ್ರದುರ್ಗ:ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡುವ 'ರಾಷ್ಟ್ರಪತಿ ಪದಕ'ಕ್ಕೆ ಡಿವೈಎಸ್ಪಿ ಜಿ.ಹೆಚ್.ತಿಪ್ಪೇಸ್ವಾಮಿ ಅವರು ಭಾಜನರಾಗಿದ್ದಾರೆ.
ದಾವಣಗೆರೆ, ಬಳ್ಳಾರಿ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತಿಪ್ಪೇಸ್ವಾಮಿ ಅವರಿಗೆ ಕೇಂದ್ರ ಗೃಹ ಇಲಾಖೆ ಈ ಪದಕ ನೀಡಲಾಗುತ್ತಿದೆ.
ಇನ್ನೂ ಭಾರತ ಸರ್ಕಾರ ಗೃಹ ಇಲಾಖೆಯಿಂದ ನೀಡುವ ಯೂನಿಯನ್ ಹೋಮ್ ಮಿನಿಸ್ಟರ್ ಆಫ್ ಎಕ್ಸ್ಲೆನ್ಸ್ ಇನ್ ಪೋಲಿಸ್ ಟ್ರೈನಿಂಗ್ ಮೆಡಲ್ಗೆ ಜಿಲ್ಲಾ ಐಮಂಗಲ ಪೋಲಿಸ್ ತರಬೇತಿ ಶಾಲೆಯ ಪಿಎಸ್ಐ ಬಿ.ಪರಶುರಾಮ್ ಭಾಜನರಾಗಿದ್ದಾರೆ. ಒಟ್ಟಿಗೆ ಜಿಲ್ಲೆಗೆ ಎರಡು ಪದಕಗಳು ಲಭಿಸಿದ್ದು, ಜಿಲ್ಲಾ ಪೋಲಿಸ್ ಇಲಾಖೆ ಸಂತಸ ವ್ಯಕ್ತಪಡಿಸಿದೆ.