ಕರ್ನಾಟಕ

karnataka

ETV Bharat / state

ಕೇಂದ್ರದ ಆರ್ಥಿಕ ನೀತಿಯ ವಿರುದ್ಧ ಸಮರ ಸಾರಿದ ರಂಗಕರ್ಮಿ ಪ್ರಸನ್ನ.. - Prasanna News In Chitradurga

ಜನಸಾಮಾನ್ಯರ ಮೇಲಾಗುತ್ತಿರುವ ತೆರಿಗೆ ಹೊರೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಕ್ಷಸೀಯ ನೀತಿಗಳಿಂದ ಆರ್ಥಿಕತೆ‌ ಸೋಲುತ್ತಿದೆ. ಪರ್ಯಾಯವಾಗಿ ಪವಿತ್ರ ಆರ್ಥಿಕ ನೀತಿಯ ಜಾರಿ ಅಗತ್ಯವಿದೆ ಎಂಬ ವಿಷಯದಡಿ ಸಂವಾದ ಏರ್ಪಡಿಸಿದ್ದರು.

prasanna Talking against to  central govt
ಕೇಂದ್ರದ ಆರ್ಥಿಕ ನೀತಿಯ ವಿರುದ್ದ ಸಮಸಾರಿದ ಪ್ರಸನ್ನ

By

Published : Dec 17, 2019, 7:05 PM IST

Updated : Dec 18, 2019, 9:11 AM IST

ಚಿತ್ರದುರ್ಗ: ಹೋರಾಟಗಾರ ಹಾಗೂ ರಂಗಕರ್ಮಿ ಪ್ರಸನ್ನ ಅವರು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಆರ್ಥಿಕ ನೀತಿ ಸರಿಪಡಿಸುವಂತೆ ಆಗ್ರಹಿಸಿ ನಗರದ ಎಸ್ ​ಎನ್ ಸ್ಮಾರಕದ ಬಳಿ​ ಸಮಾವೇಶ ನಡೆಸಿದರು.

ಜಿಎಸ್ಟಿಯಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ದೂರ ಮಾಡಲು ಪವಿತ್ರ ಆರ್ಥಿಕತೆ ಸತ್ಯಾಗ್ರಹ ಮುಂದುವರಿಕೆ ಎಂಬ ಘೋಷ ವಾಕ್ಯದಲ್ಲಿಂದು ನಗರದ ಎಸ್ ​ಎನ್ ಸ್ಮಾರಕದ ಬಳಿ ಸಮಾವೇಶ ಮಾಡಿದರು.

ಕೇಂದ್ರದ ಆರ್ಥಿಕ ನೀತಿಯ ವಿರುದ್ಧ ರಂಗಕರ್ಮಿ ಪ್ರಸನ್ನ ಹೋರಾಟ..

ಜನಸಾಮಾನ್ಯರ ಮೇಲಾಗುತ್ತಿರುವ ತೆರಿಗೆ ಹೊರೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಕ್ಷಸೀಯ ನೀತಿಗಳಿಂದ ಆರ್ಥಿಕತೆ‌ ಸೋಲುತ್ತಿದೆ. ಪರ್ಯಾಯವಾಗಿ ಪವಿತ್ರ ಆರ್ಥಿಕ ನೀತಿಯ ಜಾರಿ ಅಗತ್ಯವಿದೆ ಎಂಬ ವಿಷಯದಡಿ ಸಂವಾದ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಪ್ರಶ್ನೆಗಾರರರಿಗೆ ಹೋರಾಟಗಾರ ಪ್ರಸನ್ನ ಉತ್ತರ ನೀಡಿದರು.

ನಂತರ ಮಾತನಾಡಿದ ಪ್ರಸನ್ನ, ಈ ಹೋರಾಟ ಶೇ. 94% ರಷ್ಟು ದುಡಿಯುತ್ತಿರುವವರ ಪರವಾಗಿದೆ. ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಗಾಂಧೀಜಿ ಮಾದರಿಯ ಸತ್ಯಾಗ್ರಹ. ಬಡವರ ಪರ ಉದ್ಯಮ ಶೀಲತೆಗಾಗಿ ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದರು. ಸಮಾವೇಶದಲ್ಲಿ ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಚಾರ್ಯ ಶ್ರೀ, ಮಾಜಿ ಸಂಸದ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.

Last Updated : Dec 18, 2019, 9:11 AM IST

ABOUT THE AUTHOR

...view details