ಕರ್ನಾಟಕ

karnataka

ETV Bharat / state

ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನ ರಕ್ಷಣೆ ಮಾಡಿದ ಖಾಕಿ ಪಡೆ - ಚಿತ್ರದುರ್ಗ

ವಿಷ ಸೇವಿಸಲು ಮುಂದಾಗಿದ್ದ ಯುವತಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಗ್ರಾಮದವಳು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನ ಹೊಸದುರ್ಗ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಘಟನೆ ಕುರಿತು ಮಾಹಿತಿ ಪಡೆಕೊಂಡಿದ್ದಾರೆ..

Police rescued a young woman
ಆತ್ಮಹತ್ಯೆಗೆ ಮುಂದಾಗಿದ್ದ ಯುವತಿ ರಕ್ಷಣೆ

By

Published : Feb 3, 2021, 5:16 PM IST

ಚಿತ್ರದುರ್ಗ :ಪ್ರೀತಿ ವಿಚಾರವಾಗಿ ಮನನೊಂದು ವಿಷ ಕುಡಿಯಲು ಯತ್ನಿಸಿದ ಯುವತಿಯನ್ನು ತಡೆದ ಘಟನೆ ಹೊಸದುರ್ಗ ತಾಲೂಕಿನ‌ ಕುಂದೂರು ಬಳಿ ನಡೆದಿದೆ.

ಪ್ರೀತಿಯ ಬಲೆಗೆ ಸಿಲುಕಿ ಮನನೊಂದ ಯುವತಿ (21) ಕ್ರಿಮಿನಾಶ ಔಷದ ಬಾಟಲಿ ಹಿಡಿದು ಕುಂದೂರು ಗ್ರಾಮದ ರಸ್ತೆ ಬಳಿ ನಿಂತಿದ್ದಳು‌. ಯುವತಿಯ ಕೈನಲ್ಲಿ ವಿಷದ ಬಾಟಲಿ ನೋಡಿದ ಸಾರ್ವಜನಿಕರು ತುರ್ತು ಸ್ಪಂದನ ಸಹಾಯವಾಣಿ 122ಕ್ಕೆ ಕರೆ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕಾಗಮಿಸಿದ ಖಾಕಿ ಪಡೆ, ವಿಷ ಸೇವಿಸಲು ಮುಂದಾಗಿದ್ದ, ಯವತಿ ಕೈಯಲ್ಲಿದ್ದ ವಿಷದ ಬಾಟಲಿ ವಶಕ್ಕೆ ಪಡೆದುಕೊಂಡು‌ ಆತ್ಮಹತ್ಯೆಗೆ ಯತ್ನಿಸಿದ ಯುವತಿಗೆ ಮನವೊಲಿಸಿದ್ದಾರೆ.

ವಿಷ ಸೇವಿಸಲು ಮುಂದಾಗಿದ್ದ ಯುವತಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಗ್ರಾಮದವಳು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನ ಹೊಸದುರ್ಗ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಘಟನೆ ಕುರಿತು ಮಾಹಿತಿ ಪಡೆಕೊಂಡಿದ್ದಾರೆ.

ABOUT THE AUTHOR

...view details