ಚಿತ್ರದುರ್ಗ: ಸದಾ ಕರ್ತವ್ಯದಲ್ಲಿ ನಿರತರಾಗಿರುವ ಜಿಲ್ಲೆಯ ಪೊಲೀಸ್ ಸಿಬ್ಬಂದಿ, ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರ ನೇತೃತ್ವದಲ್ಲಿ ಜೋಗಿಮಟ್ಟಿ ಅರಣ್ಯ ಧಾಮದಲ್ಲಿ ವಾಕಿಂಗ್, ವ್ಯಾಯಾಮ ಮಾಡುವ ಮೂಲಕ ರಿಲ್ಯಾಕ್ಸ್ ಆದರು.
ಈ ವೇಳೆ ಮಾತನಾಡಿದ ಎಸ್ಪಿ ರಾಧಿಕಾ, ದೈಹಿಕ ಶಕ್ತಿ ಹೆಚ್ಚಿಸಲು ಪ್ರತಿದಿನ ಮುಂಜಾನೆ ಒಂದು ತಾಸು ವಾಕಿಂಗ್, ವ್ಯಾಯಾಮ, ಯೋಗಾಸನ ಮತ್ತು ಸೂರ್ಯ ನಮಸ್ಕಾರ ರೂಡಿಸಿಕೊಳ್ಳಬೇಕು. ನಾವು ಕರ್ತವ್ಯ ಪಾಲನೆ ಮಾಡಿ ಸಮಾಜದ ಕಾನೂನು ಸುವ್ಯವಸ್ಥಿತೆ ಕಾಪಾಡುವುದರ ಜೊತೆ ಜೊತೆಗೆ ನಮ್ಮ ಮತ್ತು ನಮ್ಮ ಕುಟುಂಬದ ಅರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.