ಕರ್ನಾಟಕ

karnataka

ETV Bharat / state

ಕಳ್ಳರಿಂದ ಜಪ್ತಿ ಮಾಡಲಾದ 2.12 ಕೋಟಿ ರೂ.ಮೌಲ್ಯದ ವಸ್ತು ವಾರಸುದಾರರಿಗೆ ಹಸ್ತಾಂತರ - ಪೊಲೀಸ್ ಕವಾಯತು ಮೈದಾನ ಚಿತ್ರದುರ್ಗ

2020 ನವೆಂಬರ್ ತಿಂಗಳಿಂದ 2021 ನವೆಂಬರ್ ವರೆಗೂ 65 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಕಳುವಾಗಿದ್ದ ವಸ್ತುಗಳ ಜಪ್ತಿ ಮಾಡಿದ್ದ ಪೊಲೀಸರು ಇದೀಗ ಮಾಲೀಕರ ಗುರುತಿಸಿ ಅವರ ಸ್ವತ್ತನ್ನು ಹಸ್ತಾಂತರಿಸಿದ್ದಾರೆ.

police-handed-over-the-property
ಕಳ್ಳರಿಂದ ಜಪ್ತಿ ಮಾಡಲಾದ ವಸ್ತು ವಾರಸುದಾರರಿಗೆ ಹಸ್ತಾಂತರ

By

Published : Dec 3, 2021, 3:31 PM IST

ಚಿತ್ರದುರ್ಗ:ಜಿಲ್ಲೆಯಲ್ಲಿ ದಾಖಲಾಗಿದ್ದ ವಿವಿಧ ಕಳ್ಳತನ ಪ್ರಕರಣಗಳ ಭೇದಿಸಿರುವ ಪೊಲೀಸರು ಸುಮಾರು 2.12 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದ್ದ ಸರಗಳ್ಳತನ, ಮನೆ ಕಳ್ಳತನ, ದೇವಾಲಯ ಹುಂಡಿ ಕಳವು ಹೀಗೆ ಅನೇಕ ಪ್ರಕರಣಗಳ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕಳ್ಳರ ಬಂಧಿಸಿ ಕದ್ದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.

ಚಿತ್ರದುರ್ಗ ಪೊಲೀಸ್ ಕವಾಯತು ಮೈದಾನದಲ್ಲಿ ವಾರಸುದಾರರನ್ನು ಗುರುತಿಸಿ ಅವರ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ. 2020 ನವೆಂಬರ್ ತಿಂಗಳಿಂದ 2021 ನವೆಂಬರ್ ವರೆಗೂ 65 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. 27 ಚಿನ್ನಾಭರಣ ಕಳ್ಳತನ ಪ್ರಕರಣಗಳಿಂದ 54.85 ಲಕ್ಷ ರೂಪಾಯಿ, 14.31 ಲಕ್ಷ ಮೌಲ್ಯದ ಕಾರು ಹಾಗೂ ಬೈಕ್​​​ನ 22 ಕಳ್ಳತನ ಪ್ರಕರಣ, 6 ಪ್ರಕರಣಗಳಿಂದ 3.18 ಲಕ್ಷ ನಗದು, ಇತರ 10 ಪ್ರಕರಣಗಳಿಂದ 1.39 ಕೋಟಿ ರೂಪಾಯಿ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿತ್ತು.

ಹಿರಿಯೂರು ಠಾಣೆ ಮುಂಚೂಣಿ

ಶ್ರೀರಾಂಪುರ 9, ಚಿತ್ರದುರ್ಗ ನಗರ & ಗ್ರಾಮಾಂತರ ತಲಾ 7, ಚಿತ್ರದುರ್ಗ ಕೋಟೆ ಠಾಣೆ, ಹಿರಿಯೂರು ಗ್ರಾಮಾಂತರ ಠಾಣೆ ತಲಾ 6, ಚಿತ್ರದುರ್ಗ ಬಡಾವಣೆ, ಹೊಳಲ್ಕೆರೆ, ಭರಮಸಾಗರ, ಹಿರಿಯೂರು ನಗರ, ಹೊಸದುರ್ಗ ಚಳ್ಳಕೆರೆ ತಲಾ 4, ಐಮಂಗಲ 3, ಚಿಕ್ಕ ಜಾಜೂರು, ಪರುಶುರಾಮಪುರ ತಲಾ ಒಂದು ಪ್ರಕರಣ ಸೇರಿ 65 ಪ್ರಕರಣ ಭೇದಿಸಿದ್ದಾರೆ.

ಅದರಲ್ಲೂ ಅತಿಹೆಚ್ಚು ಪ್ರಕರಣ ಭೇದಿಸುವಲ್ಲಿ ಹಿರಿಯೂರು ಠಾಣೆ ಮುಚೂಣಿಯಲ್ಲಿದೆ. ಮಾಂಗಲ್ಯ ಸರ ಕಳವು, ಬೈಕ್, ಶ್ರೀಗಂಧ, ಸಿಲಿಂಡರ್, ಕಾರು, ದೇವಸ್ಥಾನಗಳ ಹುಂಡಿ, ಅಡಿಕೆ, ರೈತನ ಹೋರಿಗಳು ಸಹ ಕಳ್ಳತನವಾಗಿದ್ದು, ವಾರಸುದಾರರಿಗೆ ಸ್ವತ್ತನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ:ನೇಣು ಬಿಗಿದುಕೊಂಡು ಫೈನಾನ್ಸಿಯರ್ ಆತ್ಮಹತ್ಯೆ : ಸ್ಥಳದಲ್ಲಿ ಡೆತ್​ನೋಟ್​​​ ಪತ್ತೆ

ABOUT THE AUTHOR

...view details