ಚಿತ್ರದುರ್ಗ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ 14.5 ಟನ್ ಪಡಿತರ ಅಕ್ಕಿ ಜೊತೆ ಲಾರಿಯನ್ನು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಸಮೀಪ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ KA-52 9130 ನಂಬರ್ನ ಲಾರಿ ಮೇಲೆ ದಾಳಿ ನಡೆಸಿದ ರಾಂಪುರ ಠಾಣೆಯ ಪಿಎಸ್ಐ ಗುಡ್ಡಪ್ಪರವರ ನೇತೃತ್ವದ ತಂಡ ಅಕ್ಕಿ ಸಮೇತ ಲಾರಿ ವಶಕ್ಕೆ ಪಡೆದಿದ್ದಾರೆ.