ಕರ್ನಾಟಕ

karnataka

ETV Bharat / state

ಭೋವಿ ಸ್ವಾಮೀಜಿ ಮತ್ತು ಶಾಸಕರಿಗೆ ಜೀವ ಬೆದರಿಕೆ.. ಆರೋಪಿ ವೈದ್ಯನ ಬಂಧನ - ಚಿತ್ರದುರ್ಗ

ಕೆಎಸ್​ಪಿ ಆ್ಯಪ್​ ಮೂಲಕ ಭೋವಿ ಗುರುಪೀಠದ ಸ್ವಾಮೀಜಿ ಹಾಗು ಕೆಲವರಿಗೆ ಜೀವ ಬೆದರಿಕೆ- ಆರೋಪಿ ವೈದ್ಯನ ಬಂಧನ- ಡಾ. ತಿಪ್ಪೇರುದ್ರಸ್ವಾಮಿ ಅರೆಸ್ಟ್​

police
ಭೋವಿ ಸ್ವಾಮೀಜಿ ಮತ್ತು ಶಾಸಕರಿಗೆ ಜೀವ ಬೆದರಿಕೆ ಹಾಕಿದ ವೈದ್ಯನ ಬಂಧನ

By

Published : Jul 17, 2022, 7:45 PM IST

ಚಿತ್ರದುರ್ಗ : ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕರಾದ, ಗೂಳಿಹಟ್ಟಿ ಡಿ.ಶೇಖರ್ ಹಾಗೂ ಎಂ.ಚಂದ್ರಪ್ಪರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುದ್ದೇನಹಳ್ಳಿಯ‌ ಸತ್ಯಸಾಯಿ ಸರಳ ಆಸ್ಪತ್ರೆಯ ವೈದ್ಯ ಡಾ.ತಿಪ್ಪೇರುದ್ರಸ್ವಾಮಿ‌ ಬಂಧಿತ ಆರೋಪಿ. ತಿಪ್ಪೇರುದ್ರಸ್ವಾಮಿ ವಡ್ಡೆ ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಎಂದು ತಿಳಿದುಬಂದಿದೆ.

ಭೋವಿ ಸ್ವಾಮೀಜಿ ಮತ್ತು ಶಾಸಕರಿಗೆ ಜೀವ ಬೆದರಿಕೆ ಹಾಕಿದ ವೈದ್ಯನ ಬಂಧನ

ಜುಲೈ 14ರಂದು ಕೆಎಸ್​ಪಿ ಆ್ಯಪ್​ ಮೂಲಕ ಜಿಲ್ಲಾ ಪೊಲೀಸ್ ಕಚೇರಿಗೆ ಚಿತ್ರದುರ್ಗದ ಭೋವಿ ಮಠದ ಇಮ್ಮಡಿ‌ ಸಿದ್ಧರಾಮೇಶ್ವರ ಶ್ರೀ, ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ ಬಿಜೆಪಿ‌ ಶಾಸಕ ಎಂ.ಚಂದ್ರಪ್ಪ ಸೇರಿ ಹಲವರಿಗೆ ಪ್ರಾಣ ಬೆದರಿಕೆ ಸಂದೇಶ ರವಾನಿಸಲಾಗಿತ್ತು‌. ಈ ಬಗ್ಗೆ ಪೊಲೀಸರು ತೀವ್ರವಾಗಿ ತನಿಖೆ ಆರಂಭಿಸಿದ್ದರು. ಕ್ಲುಲ್ಲಕ ಕಾರಣಕ್ಕೆ ಜೀವ ಬೆದರಿಕೆ ಹಾಕಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ :ಕೆಎಸ್​ಪಿ ಆ್ಯಪ್ ಮೂಲಕ ಕೊಲೆ ಬೆದರಿಕೆ: ಎಸ್​ಪಿ ಕೆ. ಪರಶುರಾಮ್

ABOUT THE AUTHOR

...view details