ಕರ್ನಾಟಕ

karnataka

ETV Bharat / state

ವಿಶೇಷಚೇತನ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿ ಬಂಧನ - ಚಿತ್ರದುರ್ಗದಲ್ಲಿ ಅತ್ಯಾಚಾರ ಆರೋಪಿ ಬಂಧನ

ಪ್ರಕರಣ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಆಸ್ಪತ್ರೆ ಮುಂಭಾಗ ಸಾರ್ವಜನಿಕರು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು..

accused arrest
ಆರೋಪಿ ಬಂಧನ

By

Published : Sep 17, 2021, 10:04 PM IST

ಚಿತ್ರದುರ್ಗ :ವಿಶೇಷಚೇತನ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಎಸ್ಪಿ ರಾಧಿಕಾ

ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ನಾಗೇಶ್​​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತವರು ಮನೆಗೆ ಹೋಗಿದ್ದ ಮಹಿಳೆ (ಕಿವಿ, ಮಾತು ಬಾರದ ಮಹಿಳೆ) ಗುರುವಾರ ರಾತ್ರಿ ಕೊನೆಯ ಬಸ್‌ಗೆ ಹಳ್ಳಿಗೆ ಬಂದಿದ್ದಾರೆ.

ಬಸ್ ನಿಲ್ದಾಣದಿಂದ ಸುಮಾರು 200 ಮೀಟರ್ ದೂರದಲ್ಲಿದ್ದ ಮನೆಗೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ವ್ಯಕ್ತಿ ಹೀನ ಕೃತ್ಯವೆಸಗಿ ಪರಾರಿಯಾಗಿದ್ದ. ಘಟನೆಯಲ್ಲಿ ಆರೋಪಿ ಮಹಿಳೆ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಗಾಯಗೊಂಡ ಸಂತ್ರಸ್ತೆಯನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂಕ್ತ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಆಸ್ಪತ್ರೆ ಮುಂಭಾಗ ಸಾರ್ವಜನಿಕರು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ; 5 ದಿನದಿಂದ ಶವಗಳ ಮಧ್ಯೆಯೇ ಅನ್ನ-ನೀರಿಲ್ಲದೆ ಬದುಕಿದ ಕಂದಮ್ಮ

ABOUT THE AUTHOR

...view details