ಚಿತ್ರದುರ್ಗ: ಪ್ರಧಾನಿ ಮೋದಿಯವರ 70 ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ರೈತ ಮೋರ್ಚಾದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. 70 ಹಸುಗಳನ್ನು ಪೂಜಿಸಿ, 70 ರೈತರಿಗೆ ಸನ್ಮಾನ ಮಾಡಲಾಯಿತು.
ಚಿತ್ರದುರ್ಗ: ಹಸುಗಳನ್ನು ಪೂಜಿಸಿ, ರೈತರನ್ನು ಸನ್ಮಾನಿಸಿ ಮೋದಿ ಹುಟ್ಟುಹಬ್ಬ ಆಚರಣೆ - ಚಿತ್ರದುರ್ಗ ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಣೆ
ಚಿತ್ರದುರ್ಗದ ಹೊರವಲಯದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಸೇರಿದ ಗೋಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ 70 ಗೋವುಗಳಿಗೆ ದವಸ ಧಾನ್ಯ ತಿನ್ನಿಸಲಾಯಿತು.
ಚಿತ್ರದುರ್ಗದ ಹೊರವಲಯದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಸೇರಿದ ಗೋಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ 70 ಗೋವುಗಳಿಗೆ ದವಸ ಧಾನ್ಯ ತಿನ್ನಿಸಲಾಯಿತು. ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿಯವರ ನೇತೃತ್ವದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಸಾಕಷ್ಟು ಕಾರ್ಯಕರ್ತರು ಭಾಗಿಯಾಗಿ ಪ್ರಧಾನಿ ಮೋದಿಯವರಿಗೆ ಶುಭಾಶಯ ಕೋರಿ ನೂರು ವರ್ಷಗಳ ಕಾಲ ಬಾಳುವಂತೆ ಹರಸಿದರು.
ಬಳಿಕ ಮಾತಮಾಡಿದ ಶಾಸಕ ತಿಪ್ಪಾರೆಡ್ಡಿ ರೈತ ಮೋರ್ಚಾದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 70 ಹಸುಗಳಿಗೆ ಪೂಜೆ ಮಾಡಿ, 70 ರೈತರಿಗೆ ಸನ್ಮಾನ ಮಾಡುವ ಮೂಲಕ ಮೋದಿಯವರ ಜನ್ಮದಿನವನ್ನು ಆಚರಿಸಲಾಯಿತು ಎಂದರು.