ಚಿತ್ರದುರ್ಗ: ನಗರ ಬಳಿಯ ಮುರುಘಾಮಠದಲ್ಲಿ ವಿಚಿತ್ರ ಬಗೆಯ ಕಳ್ಳತನ ನಡೆದಿರುವುದು ವರದಿಯಾಗಿದೆ. ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ 47 ಫೋಟೋಗಳನ್ನು ಕದ್ದೊಯ್ಯಲಾಗಿದೆ. ವಿವಿಧ ಗಣ್ಯರ ಜೊತೆ ಮುರುಘಾ ಶರಣರು ಇರುವ ಫೋಟೋಗಳು ಇಲ್ಲಿದ್ದವು. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಸಿಎಂಗಳ ಜತೆಗಿನ ಫೋಟೋಗಳಿದ್ದವು.
ಈ ಫೋಟೋಗಳನ್ನು ಇಬ್ಬರು ಕಳ್ಳತನದ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಕ್ಟೋಬರ್ 5ರ ಮಧ್ಯರಾತ್ರಿ ವೇಳೆ ಫೋಟೋಗಳ ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಹನವೊಂದರಲ್ಲಿ ಫೋಟೋಗಳನ್ನು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ.