ಕರ್ನಾಟಕ

karnataka

ETV Bharat / state

ಸರ್ಕಾರದ ಆದೇಶ ಉಲ್ಲಂಘಿಸಿ ಪ್ರತಿ ಪಡಿತರ‌ ಕಾರ್ಡಿಗೆ 20 ರೂ. ವಸೂಲಿ.. - ಪಡಿತರ ನೀಡಲು ಹಣ ವಸೂಲಿ

ಪಡಿತರ ಉಚಿತವಾಗಿ ನೀಡಬೇಕೆಂಬ ಸರ್ಕಾರದ ಆದೇಶಕ್ಕೆ ಕಿಂಚಿತ್ತೂ ಕಿಮ್ಮತ್ತು ನೀಡದೇ ರೇಷನ್​​ ನೀಡಲು ಹಣ ಪಡೆಯುತ್ತಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

people charges to take ration
ಸರ್ಕಾರದ ಆದೇಶ ಉಲ್ಲಂಘನೆ

By

Published : Apr 8, 2020, 12:36 PM IST

ಚಿತ್ರದುರ್ಗ :ಕೊರೊನಾ ಲಾಕ್​​ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಉಚಿತವಾಗಿ ಪಡಿತರ ನೀಡಲು ಈಗಾಗಲೇ ಆದೇಶ ಹೊರಡಿಸಿದೆ. ಆದರೆ, ಚಿತ್ರದುರ್ಗದಲ್ಲಿ ಬಡವರಿಗೆ‌ ಸರ್ಕಾರ ನೀಡುವ ಉಚಿತ ಪಡಿತರಕ್ಕೂ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ಆದೇಶ ಉಲ್ಲಂಘನೆ..

ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯ 6ನೇ ಕ್ರಾಸ್‌ನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತ ಪಡಿತರಕ್ಕೂ ಹಣ ಪಡೆಯುತ್ತಿರುವ ದೃಶ್ಯ ಲಭ್ಯವಾಗಿದೆ. ಒಂದು ಪಡಿತರ‌ ಕಾರ್ಡಿಗೆ 20 ರೂ. ಫಿಕ್ಸ್ ಮಾಡಲಾಗಿದೆ. ಸರ್ಕಾರದ ಆದೇಶ ಗಾಳಿಗೆ ತೂರಿದ‌‌‌ ನ್ಯಾಯಬೆಲೆ ಅಂಗಡಿಗಳು, ಸರ್ಕಾರದ ನಿಯಮದಂತೆ ಪಡಿತರ ನೀಡುವಲ್ಲಿ ತಾರತಮ್ಯ ಮಾಡುತ್ತಿವೆ.

ಈಗಾಗಲೇ ಹಣ ವಸೂಲಿ ಮಾಡ್ತಿರುವ ದೃಶ್ಯ‌ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತೂಕ‌ ಮಾಡುವಲ್ಲೂ ವಂಚನೆಯ ಆರೋಪ ಕೇಳಿ ಬಂದಿದೆ. ಬಡವರ ಪಾಡು ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ್ತಿಲ್ಲ‌ ಎಂಬಂತಾಗಿದೆ. ಹಣ ಪಡೆದು ಪಡಿತರ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details