ಚಿತ್ರದುರ್ಗ:ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿ ಎಂದು ಎಷ್ಟೇ ಹೇಳಿದರೂ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಫೀಲ್ಡಿಗಿಳಿದಿರುವ ನಗರಸಭೆ ಅಧಿಕಾರಿಗಳು ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಿ ಶಾಕ್ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಫೀಲ್ಡಿಗಿಳಿದ ನಗರಸಭೆ ಅಧಿಕಾರಿಗಳು.. ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ - Penalties for not wearing mask
ಬೆಳ್ಳಂಬೆಳಗ್ಗೆಯೇ ನಗರದ ಗಾಂಧಿ ವೃತ್ತದ ಬಳಿ ಕಾರ್ಯಾಚರಣೆಗಿಳಿದ ನಗರಸಭೆ ಆರೋಗ್ಯ ನಿರೀಕ್ಷಕಿ ನೇತೃತ್ವದ ತಂಡ ಮಾಸ್ಕ್ ಹಾಕದೆ ಬೇಕಾಬಿಟ್ಟಿ ಓಡಾಡುತ್ತಿದ್ದ ವಾಹನ ಸವಾರಿಗೆ ದಂಡ ವಿಧಿಸಿ ಬುದ್ಧಿ ಕಲಿಸಿದ್ದಾರೆ.
ಮಾಸ್ಕ್ ಧರಿಸದೆ ಓಡಾಡುವರಿಗೆ ದಂಡ
ಬೆಳ್ಳಂಬೆಳಗ್ಗೆಯೇ ನಗರದ ಗಾಂಧಿ ವೃತ್ತದ ಬಳಿ ಕಾರ್ಯಾಚರಣೆಗಿಳಿದ ನಗರಸಭೆ ಆರೋಗ್ಯ ನಿರೀಕ್ಷಕಿ ನೇತೃತ್ವದ ತಂಡ ಮಾಸ್ಕ್ ಹಾಕದೆ ಬೇಕಾಬಿಟ್ಟಿ ಓಡಾಡುತ್ತಿದ್ದ ವಾಹನ ಸವಾರಿಗೆ ದಂಡ ವಿಧಿಸಿ ಬುದ್ಧಿ ಕಲಿಸಿದ್ದಾರೆ.
ಸದ್ದಿಲ್ಲದೇ ಅಧಿಕಾರಿಗಳು ಈ ಕಾರ್ಯಾಚರಣೆಗೆ ಮುಂದಾಗಿದ್ದು, ಬೇಜವಾಬ್ದಾರಿಯಿಂದ ಓಡಾಡುತ್ತಿದ್ದವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.