ಚಿತ್ರದುರ್ಗ:ಜಿಲ್ಲೆಯಲ್ಲಿ ಸುರಿದ ಗಾಳಿ ಸಹಿತ ಧಾರಾಕಾರ ಮಳೆಗೆ ರೈತ ಬೆಳೆದು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಶೇಂಗಾ, ರಾಗಿ ಸಂಪೂರ್ಣ ನೀರುಪಾಲಾಗಿದೆ.
ಮಳೆ ಅವಾಂತರ: ಬೆಳೆದು ಮನೆಯಲ್ಲಿಟ್ಟಿದ್ದ ಶೇಂಗಾ, ರಾಗಿ ನೀರುಪಾಲು - ಹೊಸದುರ್ಗ ತಾಲೂಕಿನ ಸಣ್ಣಕಿಟ್ಟದಹಳ್ಳಿ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಣ್ಣಕಿಟ್ಟದಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ರೈತ ಹೈರಾಣಾಗಿದ್ದಾನೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಸಣ್ಣಕಿಟ್ಟದಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ರೈತ ಹೈರಾಣಾಗಿದ್ದಾನೆ. ಅಲ್ಲದೇ ಸಣ್ಣಕಿಟ್ಟದಹಳ್ಳಿ ಗೊಲ್ಲರಹಟ್ಟಿ ಗ್ರಾಮದ ನಿವಾಸಿಯಾದ ರೈತ ನಾಗಪ್ಪ ಎಂಬುವರಿಗೆ ಸೇರಿದ ಮನೆ ಸಂಪೂರ್ಣವಾಗಿ ನೆಲಕಚ್ಚಿದೆ. ಮನೆಯಲ್ಲಿ ಇದ್ದ ದವಸ ಧಾನ್ಯಗಳು ನೀರುಪಾಲಾಗಿದ್ದು, ರೈತನ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಯಲ್ಲಿರಿಸಿದ್ದ 20 ಚೀಲ ಶೇಂಗಾದಲ್ಲಿ 10 ಚೀಲ ಹಾಗೂ 15 ಚೀಲ ರಾಗಿ ಸಂಪೂರ್ಣವಾಗಿ ನೀರುಪಾಲಾಗಿದೆ. ಇನ್ನು ಮನೆಯಲ್ಲಿಟ್ಟಿದ್ದ ದಿನ ಬಳಕೆ ವಸ್ತುಗಳು ಕೂಡ ನೀರುಪಾಲಾಗಿವೆ. ಮಳೆಯ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ. ಮನೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದರೂ ಅದೃಷ್ಟಕ್ಕೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇನ್ನು ಭಾರೀ ಗಾಳಿಯಿಂದ ರೈತನ ಶ್ರಮ ಸಂಪೂರ್ಣವಾಗಿ ನೀರುಪಾಲಗಿದ್ದರಿಂದ ರೈತ ನಾಗಪ್ಪ ಜಿಲ್ಲಾಡಳಿತದ ಸಹಾಯಕ್ಕಾಗಿ ಕಾದು ಕೂತಿದ್ದಾನೆ.