ಚಿತ್ರದುರ್ಗ:ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಬ್ಯಾಗ್ವೊಂದನ್ನು ಪೊಲೀಸರಿಗೆ ಮರಳಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಆಟೋ ಡ್ರೈವರ್ ಸೈಯದ್, ಮಹಿಳೆಯೊಬ್ಬರು ಬಿಟ್ಟುಹೋಗಿದ್ದ 2 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಹಾಗೂ 2 ಮೊಬೈಲ್ ಇದ್ದ ಬ್ಯಾಗ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರದ ಹರಿಪ್ರಿಯ ಎಂಬುವವರು ಜೂನ್ 29ರ ಸಂಜೆ 5 ಗಂಟೆ ಸಮಯದಲ್ಲಿ ಚಂದ್ರವಳ್ಳಿಯಿಂದ ಆಟೋದಲ್ಲಿ ಮನೆಗೆ ತೆರಳಿದ್ದಾರೆ. ಆದ್ರೆ ಆಟೋ ಇಳಿಯುವ ಗಡಿಬಿಡಿಯಲ್ಲಿ ತಮ್ಮ ಬ್ಯಾಗ್ ಅನ್ನು ಆಟೋದಲ್ಲೇ ಬಿಟ್ಟು ಹೋಗಿದ್ದರು. ಕೆಲ ಸಮಯದ ನಂತರ ಆಟೋ ಚಾಲಕ ಆ ಬ್ಯಾಗ್ ಅನ್ನು ಗಮನಿಸಿದಾಗ ಅದರಲ್ಲಿ 2 ಲಕ್ಷ 50 ಸಾವಿರ ಮೌಲ್ಯದ ಮಾಂಗಲ್ಯಸರ, ಎರಡು ಮೊಬೈಲ್ ಹಾಗು ಹಣ ಇರುವುದು ಗೊತ್ತಾಗಿದೆ.