ಚಿತ್ರದುರ್ಗ:ಸಿಎಂ ಯಡಿಯೂರಪ್ಪ ಬಜೆಟ್ ಘೋಷಣೆ ಮಾಡಿದಾಗ ಕಾಡುಗೊಲ್ಲ ಸಮುದಾಯಕ್ಕೆ 100 ಕೋಟಿ ರೂ ಹಣ ಇಟ್ಟು, ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರೆ ಸರಿಯಾಗಿರ್ತಿತ್ತು. ಅದ್ರೆ ಇದೀಗ ಶಿರಾ ಉಪ ಚುನಾವಣೆ ಎದುರಾಗಿದ್ದರಿಂದ ನಿಗಮ ಸ್ಥಾಪಿಸಿ ಅದರಲ್ಲಿ ಮೂರು ಕಾಸು ಹಣ ಇಡದೆ ರಾಜಕಾರಣ ಮಾಡುತ್ತಿದ್ದಾರೆಂದು ಪರಮೇಶ್ವರ್ ಸಿಎಂ ವಿರುದ್ಧ ಗುಡುಗಿದ್ದಾರೆ.
ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಹಣ ಇಡದೆ ಸಿಎಂ ರಾಜಕಾರಣ: ಪರಮೇಶ್ವರ್ - chitradurga Sri Krishna Yadavananda Math
ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಚಿತ್ರದುರ್ಗದ ಶ್ರೀಕೃಷ್ಣ ಯಾದವನಂದ ಮಠಕ್ಕೆ ಭೇಟಿ ನೀಡಿ ಯಾದವನಂದ ಶ್ರೀಗಳಿಂದ ಆಶೀರ್ವಾದ ಪಡೆದರು.
ಪರಮೇಶ್ವರ್
ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಗೆದ್ದಂತೆ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಿರಾ ಮತಕ್ಷೇತ್ರದ ಜನತೆ ಯಾರನ್ನು ಗೆಲ್ಲಿಸಬೇಕೆಂದು ತೀರ್ಮಾನ ಮಾಡ್ತಾರೆ. ನಮ್ಮ ಅಭ್ಯರ್ಥಿ ಅನುಭವಿ. ಜನರ ಆಶೀರ್ವಾದ ಟಿ.ಬಿ.ಜಯಚಂದ್ರರವರ ಮೇಲಿದೆ. ಚುನಾವಣೆಯಲ್ಲಿ ಅವರ ಗೆಲುವಿಗೆ ಅಭಿವೃದ್ಧಿ ಕೆಲಸಗಳೇ ಸಾಕ್ಷಿ ಎಂದರು.