ಚಿತ್ರದುರ್ಗ:ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅನುಭವಿ ವರ್ಗಾವಣೆ ದಂಧೆಕೋರ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರೇವಣ್ಣಗೆ ತಿರುಗೇಟು ನೀಡಿದರು.
ಚಿತ್ರದುರ್ಗ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ವಿಪಕ್ಷ ನಾಯಕರಿಂದ ಕಾಂಗ್ರೆಸ್ ಜೀವಂತಿಕೆ ತೋರಿಕೆಗೆ ಹೋರಾಟ ನಡೆಸುತ್ತಿದೆ. ಕೊರೊನಾ ವೇಳೆ ಸಹಕಾರ ಬದಲು ಹುಳುಕು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದರು.
ರೈತ ಸಂಘಟನೆ ಜತೆ ಕಾಂಗ್ರೆಸ್ನಿಂದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಶಕ್ತಿಹೀನವಾಗಿದ್ದು, ರೈತ ಸಂಘದ ಸಾಥ್ ಪಡೆಯುತ್ತಿದೆ. ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ರೈತಸಂಘ ಮತ್ತಿತರರ ಬೆಂಬಲ ಕೋರುತ್ತಿದೆ. ಕಾಂಗ್ರೆಸ್ನಲ್ಲಿ ಸಿದ್ಧರಾಮಯ್ಯ, ಡಿಕೆಶಿ ನಡುವೆ ಪೈಪೋಟಿ ನಡೆದಿದೆ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಗ್ರಾ.ಪಂ ಚುನಾವಣೆ ನಡೆಯುವ ಸ್ಥಿತಿಯಿಲ್ಲ. ಚುನಾವಣಾ ಆಯೋಗ ಸೂಚನೆ ನೀಡಿದಾಗ ಚುನಾವಣೆಗೆ ಸಿದ್ಧ. ಭಗವಂತನ ದಯೆಯಿಂದ ಕೊರೊನಾ ಹೋಗಿ ಚುನಾವಣೆ ಆಗುವಂತಾದರೆ ಸಂತೋಷ ಎಂದರು.