ಚಿತ್ರದುರ್ಗ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಇಲ್ಲಿ ಸೃಷ್ಟಿಯಾಗುವ ಶೇ. 80ರಷ್ಟು ಹುದ್ದೆಗಳು ಕನ್ನಡಿಗರಿಗೇ ಮೀಸಲಿಡಬೇಕು. ಕರ್ನಾಟಕದಲ್ಲಿದ್ದು ಅನ್ಯ ರಾಜ್ಯದ ಪರ ದನಿ ಎತ್ತುವವರು ರಾಜ್ಯ ಬಿಟ್ಟು ತೊಲಗಿ ಎಂದು ಆಗ್ರಹಿಸಿ ಸ್ವಾಭಿಮಾನಿ ಕನ್ನಡಿಗರ ತಂಡ ಬೆಂಗಳೂರಿನಿಂದ ಬೆಳಗಾವಿ ಸುವರ್ಣ ಸೌಧದವರೆಗೆ ಕಾಲ್ನಡಿಗೆ ಜಾಥಾ ಹೊರಟಿದೆ.
ಕನ್ನಡ ನಾಡು-ನುಡಿ ರಕ್ಷಣೆಗಾಗಿ ಬೆಂಗಳೂರು ಟು ಬೆಳಗಾವಿಗೆ ಪಾದಯಾತ್ರೆ.. - ಸ್ವಾಭಿಮಾನಿ ಕನ್ನಡಿಗರ ತಂಡ ಬೆಂಗಳೂರಿನಿಂದ ಬೆಳಗಾವಿಗೆ ಪಾದಯಾತ್ರೆ
ಕನ್ನಡ ರಕ್ಷಣೆಗಾಗಿ ಹಾಗೂ ಕನ್ನಡಿಗರ ಉಳಿವಿಗಾಗಿ ಸ್ವಾಭಿಮಾನಿ ಕನ್ನಡಿಗರ ತಂಡ ಬೆಂಗಳೂರಿನಿಂದ ಬೆಳಗಾವಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಇಂದು ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡಿ ನಾಳೆ ಮತ್ತೆ ತಮ್ಮ ಪಾದಯಾತ್ರೆ ಮುಂದುವರೆಸಲಿದೆ.

ಬೆಂಗಳೂರು ಟು ಬೆಳಗಾವಿ ಪಾದಾಯಾತ್ರೆ
ಬೆಂಗಳೂರು ಟು ಬೆಳಗಾವಿ ಪಾದಯಾತ್ರೆ..
ಈಗಾಗಲೆ 6ನೇ ದಿನಕ್ಕೆ ಕಾಲಿಟ್ಟಿರುವ ಈ ಜಾಥಾ ಇಂದು ಚಿತ್ರದುರ್ಗ ತಲುಪಿದೆ. ನಾಳೆ ಬೆಳಗ್ಗೆ ಮತ್ತೆ ನಡಿಗೆ ಆರಂಭಿಸಿ ಮುಂದಿನ 7 ದಿನಗಳಲ್ಲಿ ಬೆಳಗಾವಿಗೆ ತಲುಪಲಿದೆ. ಸುವರ್ಣಸೌಧದ ಬಳಿ ಸಾಂಕೇತಿಕ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿರುವ ಸ್ವಾಭಿಮಾನಿ ಕನ್ನಡಿಗರ ತಂಡ, ಬೇಡಿಕೆ ಈಡೇರುವ ತನಕ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.