ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಸ್ಫೋಟಕ ವಸ್ತು ತಿಂದು ಗಂಭೀರವಾಗಿ ಗಾಯಗೊಂಡಿದ್ದ ಎತ್ತು ಸಾವು - ಚಿತ್ರದುರ್ಗದಲ್ಲಿ ಎತ್ತು ಸಾವು

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲಸಿಂಗನಹಳ್ಳಿ ಗ್ರಾಮದಲ್ಲಿ ಸ್ಫೋಟಕ ವಸ್ತುವನ್ನು ಎತ್ತು ತಿಂದಿದೆ. ಬಳಿಕ ಮದ್ದು ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡು ಎತ್ತು ಸಾವನ್ನಪ್ಪಿದೆ.

ಸ್ಫೋಟಕ ವಸ್ತು ತಿಂದು ಗಂಭೀರವಾಗಿ ಗಾಯಗೊಂಡಿದ್ದ ಎತ್ತು ಸಾವು
Ox died by eating of explosive material at Chitradurga

By

Published : Jan 6, 2021, 4:49 PM IST

ಚಿತ್ರದುರ್ಗ:ಎತ್ತೊಂದು ಸ್ಫೋಟಕ ವಸ್ತುವನ್ನು ತಿಂದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಡು ಹಂದಿಗಳಿಂದ ಬೆಳೆ ರಕ್ಷಣೆಗಾಗಿ ಹೊಲದಲ್ಲಿ ರೈತರು ಸ್ಫೋಟಕದ ಮದ್ದನ್ನು ಇಟ್ಟಿದ್ದರು‌. ಆದರೆ ಇಲಿಗಳು ಸ್ಫೋಟಕ ಮದ್ದನ್ನು ಬೇರೆಡೆಗೆ ತೆಗೆದುಕೊಂಡು ಹೋಗಿವೆ.

ಓದಿ: ಸಿದ್ದರಾಮಯ್ಯರನ್ನು ಮತ್ತೆ ಸಿಎಂ ಮಾಡುವ ದಿಕ್ಸೂಚಿ ದಾವಣಗೆರೆಯಿಂದ ಆರಂಭ: ಆರ್.ಶಂಕರ್

ಇದೇ ವೇಳೆ ಮಲಸಿಂಗನಹಳ್ಳಿ ಗ್ರಾಮದ ರೈತ ಮಂಜುನಾಥ ಎಂಬುವವರ ಎತ್ತು ಹೊಲದಲ್ಲಿ ಮೇಯಲು ಹೋದಾಗ ಸ್ಫೋಟಕದ ವಸ್ತುವನ್ನು ಕಚ್ಚಿದೆ. ಪರಿಣಾಮ ಮದ್ದು ಸ್ಫೋಟಗೊಂಡು ಎತ್ತಿನ ಬಾಯಿ ಹಾಗೂ ಮುಖದ ಭಾಗದಲ್ಲಿ ಗಂಭೀರ ಗಾಯವಾಗಿತ್ತು.

ತಕ್ಷಣ ಗಾಯಗೊಂಡ ಎತ್ತನ್ನು ಪಶುವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎತ್ತು ಸಾವನ್ನಪ್ಪಿದೆ.

ABOUT THE AUTHOR

...view details