ಚಿತ್ರದುರ್ಗ:ಗೋಡೆ ಬರಹಗಳನ್ನು ಬರೆಯುವ ಮೂಲಕ ಜಿಲ್ಲೆಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ. ನಗರದ ಚಂದ್ರವಳ್ಳಿ ಗುಹೆ ಸೇರಿದಂತೆ ಪ್ರಮುಖ ರಸ್ತೆಗಳ ಗೋಡೆಗಳು ಹಾಗೂ ಬಂಡೆಗಳ ಮೇಲೆ ರಾತ್ರೋ ರಾತ್ರಿ No NRC, No CAA ಎಂಬ ಬರಹಗಳು ಮೂಡಿಬಂದಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಅವಹೇಳನಕಾರಿಯಾಗಿ ಬರೆಯಲಾಗಿದೆ. ಇನ್ನು ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಬರಹಗಳನ್ನು ಬರೆದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಗೋಡೆ ಬರಹಗಳನ್ನು ಬರೆಯುವ ಮೂಲಕ ಸಿಎಎಗೆ ವಿರೋಧ - ಪೌರತ್ವ (ತಿದ್ದುಪಡಿ) ಕಾಯ್ದೆ
ಗೋಡೆ ಬರಹಗಳನ್ನು ಬರೆಯುವ ಮೂಲಕ ಚಿತ್ರದುರ್ಗದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ.
ಚಿತ್ರದುರ್ಗದಲ್ಲಿ ಗೋಡೆ ಬರಹಗಳನ್ನು ಬರೆಯುವ ಮೂಲಕ ಸಿಎಎಗೆ ವಿರೋಧ
ಇನ್ನು ಈ ಬರಹಗಳನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಮುಖಂಡರು, ದೇಶಕ್ಕೆ ಮಾರಕವಾದ ಕಾನೂನುಗಳ ವಿರುದ್ಧ ಧ್ವನಿ ಎತ್ತುವುದು ಎಲ್ಲರ ಹಕ್ಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಭಯದ ವಾತಾವರಣ ನಿರ್ಮಾಣ ಮಾಡಿರುವುದರಿಂದ ಗೋಡೆ ಬರಹದ ಮಾರ್ಗವನ್ನು ಅನುಸರಿಸಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ ಪ್ರಧಾನಿ ಮತ್ತು ಗೃಹ ಸಚಿವರ ಬಗ್ಗೆ ಬರೆದಿರುವ ಅವಹೇಳನಕಾರಿ ಬರಹಗಳು ತಪ್ಪು. ಆ ರೀತಿಯ ಮಾರ್ಗವನ್ನು ಬಿಟ್ಟು ಧೈರ್ಯವಾಗಿ ಪೌರತ್ವ ಕಾಯ್ದೆ ವಿರೋಧಿಸಿ ಎಂದು ಸಲಹೆ ನೀಡಿದ್ದಾರೆ.