ಕರ್ನಾಟಕ

karnataka

ETV Bharat / state

ಈರುಳ್ಳಿ ಬೆಲೆ ಕುಸಿತ: ಸಂಕಷ್ಟದಲ್ಲಿ ಈರುಳ್ಳಿ ಬೆಳೆದ ರೈತ - ಈರುಳ್ಳಿ ಬೆಲೆ ಕುಸಿತ

ಇನ್ನು ಕಳೆದ ತಿಂಗಳು ಸುರಿದ ಅಕಾಲಿಕ ಮಳೆ ಈರುಳ್ಳಿ ಬೆಳೆಗೆ ಆಪತ್ತು ತಂದಿತ್ತು. ರೈತರಿಗೆ ಈರುಳ್ಳಿ ಮಾರಾಟದಿಂದ ಬಂದ ಹಣ ಸಾರಿಗೆ ವೆಚ್ಚ ಸಹಿತ ಭರಿಸಲಾಗುತ್ತಿಲ್ಲವಂತೆ. ಜಿಲ್ಲಾದ್ಯಾಂತ ಈ ವರ್ಷ ಒಟ್ಟು 15,223.06 ಹೆಕ್ಟೇರ್ ಪ್ರದೇಶ ಈರುಳ್ಳಿ ಬೆಳೆಯಲಾಗಿದೆ ಎಂಬ ಮಾಹಿತಿ ಇದೆ.

onion-prices-fall-in-chitrudurga
ಸಂಕಷ್ಟದಲ್ಲಿ ಈರುಳ್ಳಿ ಬೆಳೆದ ರೈತ

By

Published : Mar 9, 2021, 8:32 AM IST

ಚಿತ್ರದುರ್ಗ: ಸಾಲ-ಸೂಲ ಮಾಡಿ ಈರುಳ್ಳಿ ಬೆಳೆದ ರೈತರು ಈಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಈರುಳ್ಳಿ ಪಸಲು ಭರ್ಜರಿಯಾಗಿ ಬಂದಿದ್ದು, ಈರುಳ್ಳಿಯನ್ನ ರೈತರು ಮಾರುಕಟ್ಟೆಗೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಮಾರುಕಟ್ಟೆಯ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ವಾರದಿಂದ ಮಾರುಕಟ್ಟೆಯಲ್ಲಿ‌ ಈರುಳ್ಳಿ ಬೆಲೆ‌ ಏಕಾಏಕಿ ಕುಸಿತ ಕಂಡ ಪರಿಣಾಮ ರೈತರು ಮರಗುವಂತಾಗಿದೆ. ಇತ್ತ ತೋಟಗಾರಿಕೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲಾದ್ಯಾಂತ ಈ ವರ್ಷ ಒಟ್ಟು 15,223.06 ಹೆಕ್ಟೇರ್ ಪ್ರದೇಶ ಈರುಳ್ಳಿ ಬೆಳೆಯಲಾಗಿದೆಯಂತೆ. ಆದರೆ, ಮಾರುಕಟ್ಟೆ ಸೂಕ್ತ ಬೆಲೆ ದೊರೆಯದೇ ಅನ್ನದಾತರು ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ಮಾರುಕಟ್ಟೆಯಲ್ಲಿ ಜನರು 30 ರೂ. ಗೆ ಕೆ.ಜಿ ಈರುಳ್ಳಿ ಖದೀಸಿದರೆ, ಇತ್ತ ಬೆಳೆಗಾರರಿಗೆ ಕ್ವಿಂಟಲ್‌ಗೆ 700 ರೂ‌. ಬೆಲೆ ಸಿಗುತ್ತಿಲ್ಲವಂತೆ. ಸರ್ಕಾರ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಂಬಲ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಸಂಕಷ್ಟದಲ್ಲಿ ಈರುಳ್ಳಿ ಬೆಳೆದ ರೈತ

ಇನ್ನು ಕಳೆದ ತಿಂಗಳು ಸುರಿದ ಅಕಾಲಿಕ ಮಳೆ ಈರುಳ್ಳಿ ಬೆಳೆಗೆ ಆಪತ್ತು ತಂದಿತ್ತು. ರೈತರಿಗೆ ಈರುಳ್ಳಿ ಮಾರಾಟದಿಂದ ಬಂದ ಹಣ ಸಾರಿಗೆ ವೆಚ್ಚ ಸಹಿತ ಭರಿಸಲಾಗುತ್ತಿಲ್ಲವಂತೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಚಳ್ಳಕೆರೆ ತಾಲೂಕಿನಲ್ಲಿ ಪ್ರಸ್ತಕವಾಗಿ 6,538 ಹೆಕ್ಟೇರ್ ಪ್ರದೇಶ ಈರುಳ್ಳಿ ಬೆಳೆದರೆ, ಹಿರಿಯೂರು ತಾಲೂಕಿನಲ್ಲಿ 4166 ಹೆಕ್ಟೇರ್ ಪ್ರದೇಶ ಹಾಗೂ ಚಿತ್ರದುರ್ಗ ತಾಲೂಕಿನಲ್ಲಿ 3797 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆದರೆ, ಸರ್ಕಾರ ಹೊರ‌ ದೇಶಗಳಿಗೆ ಈರುಳ್ಳಿ ರಪ್ತು ಮಾಡದಿರುವುದು ಈರುಳ್ಳಿ ಬೆಲೆ ಕುಸಿಯಲು ಕಾರಣ ಎಂದು ರೈತರು ಆರೋಪಿಸಿದ್ದಾರೆ. ಬರುವ ದಿನಗಳಲ್ಲಿ ಬೆಂಬಲ‌ ಬೆಲೆ ಸಿಗಬಹುದು ಎಂದು ಈರುಳ್ಳಿ ಶೇಖರಣೆ ಮಾಡಿದರೆ, ಕೊಳೆತು ಹೋಗುವ ಭಯ ಕೃಷಿಕರಲ್ಲಿದೆ.‌ ತಲಾ ಎಕರೆಗೆ 50 ಸಾವಿರ ಖರ್ಚು ಮಾಡಿ ಈರುಳ್ಳಿ ಬೆಳೆದರೆ, ಸರ್ಕಾರ ಮಾತ್ರ ರೈತರ ಕಷ್ಟಗಳ ಆಲಿಸಲು ಮುಂದಾಗುತ್ತಿಲ್ಲ ಎಂದು ಅನ್ನದಾತರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಓದಿ : ಚಹಾ ಕುಡಿದು ಕಪ್​​ ತಿನ್ನಿ.. ಲಾಕ್​​ಡೌನ್ ವೇಳೆ ಯುವಕರ ಹೊಸ ಆವಿಷ್ಕಾರ

ABOUT THE AUTHOR

...view details