ಚಿತ್ರದುರ್ಗ :ತಾಲೂಕಿನಲ್ಲಿ ಹೆಚ್ಚು ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಕೊಳೆ ರೋಗಕ್ಕೆ ತುತ್ತಾಗಿ ಹಾಳಾಗಿರುವ ಈರುಳ್ಳಿ ಬೆಳೆಯನ್ನು ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಹಾಗೂ ಅಧಿಕಾರಿಗಳ ತಂಡದಿಂದ ಪರಿಶೀಲಿಸಿ, ಸಮೀಕ್ಷೆ ನಡೆಸಲಾಯಿತು.
ಕೊಳೆ ರೋಗಕ್ಕೆ ತುತ್ತಾದ ಈರುಳ್ಳಿ.. ಶಾಸಕ ತಿಪ್ಪಾರೆಡ್ಡಿ ಅವರಿಂದ ಬೆಳೆ ಸಮೀಕ್ಷೆ - MLA Thippareddy
ಕಳೆದ ವರ್ಷ ಮುಂಗಾರು ಮಳೆ ಬರಲಿಲ್ಲ. ಹಾಗಾಗಿ, ಹಿಂಗಾರಿನಲ್ಲಿ ರೈತರು ಈರುಳ್ಳಿ ಬೆಳೆದರು. ಉತ್ತಮ ಫಸಲು ಬಂದ ಸಂದರ್ಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮಾರುಕಟ್ಟೆ ಸಿಗದೇ ಬೆಳೆದ ಈರುಳ್ಳಿಯನ್ನು ತಿಪ್ಪೆಗೆ ಸುರಿದರು..
ಚಿತ್ರದುರ್ಗ ತಾಲೂಕಿನ ದಂಡಿನ ಕುರುಬರಹಟ್ಟಿ, ಕಲ್ಲಹಳ್ಳಿ, ತೋಪುರ ಮಾಳಿಗೆ ಗ್ರಾಮಗಳ ರೈತರ ಹೊಲಗಳಿಗೆ ಶುಕ್ರವಾರ ಭೇಟಿ ನೀಡಿ ಅತಿವೃಷ್ಠಿಯಿಂದ ಹಾನಿಗೀಡಾದ ಈರುಳ್ಳಿ ಬೆಳೆಯನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆಯಿಂದ ಕಳೆದ ಒಂದು ವಾರದಿಂದ ನಾಶವಾಗಿರುವ ಈರುಳ್ಳಿ ಬೆಳೆಯನ್ನು ಕುರಿತು ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 21 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಇದರಲ್ಲಿ 7 ಸಾವಿರ ಹೆಕ್ಟೇರ್ ಸಮೀಕ್ಷಾ ಕಾರ್ಯ ಮಾಡಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಬೆಳೆ ಉತ್ತಮ ಗುಣಮಟ್ಟದಿಂದ ಕೂಡಿದೆ. ರಾಜ್ಯದ ಮಾರುಕಟ್ಟೆಯಲ್ಲಿ ಜಿಲ್ಲೆಯ ಈರುಳ್ಳಿಗೆ ಉತ್ತಮ ಬೆಲೆ ದೊರೆಯುತ್ತಿತ್ತು. ಜಿಲ್ಲೆಯ ರೈತರು ವಿಶೇಷ ಕಾಳಜಿ ವಹಿಸಿ ಈರುಳ್ಳಿ ಬೆಳೆದಿದ್ದಾರೆ. ಕಳೆದ ವರ್ಷ ಮುಂಗಾರು ಮಳೆ ಬರಲಿಲ್ಲ. ಹಾಗಾಗಿ, ಹಿಂಗಾರಿನಲ್ಲಿ ರೈತರು ಈರುಳ್ಳಿ ಬೆಳೆದರು. ಉತ್ತಮ ಫಸಲು ಬಂದ ಸಂದರ್ಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮಾರುಕಟ್ಟೆ ಸಿಗದೇ ಬೆಳೆದ ಈರುಳ್ಳಿಯನ್ನು ತಿಪ್ಪೆಗೆ ಸುರಿದರು ಎಂದು ಬೇಸರ ವ್ಯಕ್ತಪಡಿಸಿದರು.