ಕರ್ನಾಟಕ

karnataka

ETV Bharat / state

ಪ್ರಧಾನ ಮಂತ್ರಿ ಸಮರ್ಥರಿದ್ದು ಅವರಿಗೆ ಏನೂ ಆಗೋದಿಲ್ಲ: ಸಚಿವ ಶ್ರೀ ರಾಮುಲು - Sri Ramulu speech against bhramnada guruji

ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಜೊತೆ ಸ್ನೇಹ ಸಂಪಾದಿಸಿದ್ದು ಪ್ರಧಾನ ಮಂತ್ರಿ ಸಮರ್ಥರಿದ್ದಾರೆ. ಅವರಿಗೆ ಏನೂ ಆಗೋದಿಲ್ಲ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಬ್ರಹ್ಮಾಂಡ‌ ಗುರೂಜಿಗೆ ಟಾಂಗ್ ನೀಡಿದರು.

ಸಚಿವ ಶ್ರೀ ರಾಮುಲು

By

Published : Oct 18, 2019, 3:10 PM IST

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಜೊತೆ ಸ್ನೇಹ ಸಂಪಾದಿಸಿದ್ದು ಪ್ರಧಾನ ಮಂತ್ರಿ ಸಮರ್ಥರಿದ್ದಾರೆ. ಅವರಿಗೆ ಏನೂ ಆಗೋದಿಲ್ಲ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಬ್ರಹ್ಮಾಂಡ‌ ಗುರೂಜಿಗೆ ಟಾಂಗ್ ನೀಡಿದರು.

ಬ್ರಹ್ಮಾಂಡ‌ ಗುರೂಜಿಗೆ ಟಾಂಗ್ ನೀಡಿದ ಶ್ರೀ ರಾಮುಲು

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಹಾಸನದ ಬ್ರಹ್ಮಾಂಡ ಗುರೂಜಿ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರಧಾನಿ ಮೋದಿಯವರಿಗೆ ಏನೂ ಆಗೋದಿಲ್ಲ ಎಂದರು.

ಡಿಕೆಶಿ ಮುಂದಿನ ಹತ್ತು ವರ್ಷಗಳ ಬಳಿಕ ಸಿಎಂ ಆಗ್ತಾರೆ ಎಂಬ ಗುರೂಜಿ ಹೇಳಿಕೆಗೆ ಉತ್ತರಿಸಿದ ಅವರು, ದೇವರ ಇಚ್ಚೆ ಯಾರು ಸಿಎಂ ಆಗುತ್ತಾರೋ ಆಗಲಿ ಎಂದರು. ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಧ್ಯೆ ಇರುವ ಕೃಷ್ಣ ಮತ್ತು ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿ ಮೌನ ವಹಿಸಿದರು.

ಇನ್ನೂ ರಾಮುಲು ಜಿಲ್ಲಾ ಪಂಚಾಯಿತಿಗೆ ಆಗಮಿಸುವಾಗ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆಗೆ ಪ್ರತಿಕ್ರಿಯೆ ನೀಡಿ, ಹೋರಾಟಗಾರರಿಗೆ ಹೋರಾಟ ಮಾಡುವ ಹಕ್ಕಿದೆ. ಶಾಂತಿಯುತವಾಗಿ ಹೋರಾಟ ಮಾಡಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನೆರೆ ವಿಷಯದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಪರಿಹಾರ ಕೊಟ್ಟಿದ್ದು, ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಪರಿಹಾರ ನೀಡಿದ್ದೇವೆ ಎಂದರು.

For All Latest Updates

TAGGED:

ABOUT THE AUTHOR

...view details