ಚಿತ್ರದುರ್ಗ:ಕೊರೊನಾ ಸೋಂಕು ತಡೆಗೆ ದೇಶಾದ್ಯಂತ 3ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ಚಳ್ಳಕೆರೆ ತಾಲೂಕಿನ ಜನ್ರು ಮಾಸ್ಕ್ ಹಾಕಿಕೊಳ್ಳದೇ ಗುಂಪು-ಗುಂಪಾಗಿ ಆಹಾರ ಕಿಟ್ ಪಡೆಯಲು ಬಂದಿದ್ದಾರೆ.
ಆಹಾರ ಕಿಟ್ ವಿತರಣೆ ವೇಳೆ ನೂಕುನುಗ್ಗಲು; ಸಾಮಾಜಿಕ ಅಂತರವೇ ಮಾಯ - chitradurga
ಆಹಾರ ಕಿಟ್ ವಿತರಣೆ ವೇಳೆ ಒಂಚೂರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ನಿರ್ಲಕ್ಷ್ಯ ವಹಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಸಾಮಾಜಿಕ ಅಂತರವೇ ಮಾಯ
ಶಾಸಕ ರಘುಮೂರ್ತಿ ನೀಡುತ್ತಿರುವ ಉಚಿತ ಪಡಿತರ ಪಡೆಯಲು ಮುಗಿಬಿದ್ದ ಸಾವಿರಾರು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರು. ಕೊರೊನಾ ಅಟ್ಟಹಾಸದ ನಡುವೆ ಮಾಸ್ಕ್ ಬಳಸದೇ ರೇಷನ್ ಗಾಗಿ ನೂಕು ನುಗ್ಗಲಾಗಿದ್ದು, ಶಾಸಕ ರಘುಮೂರ್ತಿ, ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರೂ ತಲೆಕೆಡಿಸಿಕೊಳ್ಳದೇ ಮುನ್ನುಗ್ಗಿದ್ರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಶಾಸಕರ ಕಚೇರಿ ಬಳಿ ಈ ಘಟನೆ ಸಂಭವಿಸಿದ್ದು, ಉಚಿತ ಪಡಿತರಕ್ಕಾಗಿ ಸುಮಾರು ಒಂದು ಕಿಲೋ ಮೀಟರ್ ಜನ ಕ್ಯೂ ನಿಂತಿದ್ದ ದೃಶ್ಯ ಕಂಡುಬಂತು.