ಚಿತ್ರದುರ್ಗ: ಏಳು ಸುತ್ತಿನ ಕೋಟೆಯಲ್ಲಿ ಹೊಸ ವರ್ಷ ಆಚರಿಸಲು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಭಾರತೀಯ ಪುರಾತತ್ವ ಇಲಾಖೆ ನೀಡುವ ಟಿಕೆಟ್ ಪಡೆಯಲು ಪರದಾಡಿದ್ರು.
ಹೊಸವರ್ಷ ಹಿನ್ನೆಲೆ ಚಿತ್ರದುರ್ಗದ ಕೋಟೆ ನೋಡಲು ಮುಗಿಬಿದ್ದ ಪ್ರವಾಸಿಗರು: ಟಿಕೆಟ್ಗಾಗಿ ಪರದಾಟ
ಏಳು ಸುತ್ತಿನ ಕೋಟೆಯಲ್ಲಿ ಹೊಸ ವರ್ಷ ಆಚರಿಸಲು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಭಾರತೀಯ ಪುರಾತತ್ವ ಇಲಾಖೆ ನೀಡುವ ಟಿಕೆಟ್ಗಾಗಿ ಪರದಾಡಿದ್ರು.
ಹೊಸವರ್ಷ ಹಿನ್ನೆಲೆ ಕೋಟೆಗೆ ಭೇಟಿ ನೀಡಲು ಟಿಕೆಟ್ಗಾಗಿ ಪರದಾಟ
ಕೋಟೆಗೆ ಪ್ರವೇಶಿಸಲು ಟಿಕೆಟ್ ನೀಡುವ ಕೌಂಟರ್ ಒಂದೇ ಇದ್ದ ಕಾರಣ ಜನರು ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಯಿತು. ಕೆಲವರು ಟಿಕೆಟ್ ಗಾಗಿ ಕಾದು ಕಾದು ಸುಸ್ತಾದರೆ, ಇನ್ನೂ ಕೆಲವರು ಸರಥಿ ಸಾಲಿನಲ್ಲಿ ನಿಂತು ಕಾಲ ಕಳೆದರು.
ಕೋಟೆ ವೀಕ್ಷಿಸಲು ಭಾರತೀಯ ಪುರಾತತ್ವ ಇಲಾಖೆ 25 ರೂಪಾಯಿ ನಿಗದಿ ಮಾಡಿದ್ದು, ಸಾಕಷ್ಟು ಜನರು ಕೋಟೆಗೆ ಬಂದು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಂಡರು. ಇನ್ನೂ ಕೆಲವರು ಟಿಕೆಟ್ ಸಿಗದೆ ವಾಪಸಾಗಿದ್ದು ಕಂಡುಬಂತು.