ಚಿತ್ರದುರ್ಗ:ಇಲ್ಲಿನ ಚಳ್ಳಕೆರೆ ತಾಲೂಕಿನ ಕೆನರಾ ಬ್ಯಾಂಕ್ ಸಮೀಪ ಹಸುಗೂಸನ್ನು ಬಿಟ್ಟುಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಕೈಚೀಲದಲ್ಲಿ ಹೆಣ್ಣು ಮಗುವನ್ನು ಹಾಕಿ ರಸ್ತೆ ಬದಿಯಲ್ಲಿಯೇ ಇಟ್ಟು ಹೋಗಲಾಗಿತ್ತು.
ರಸ್ತೆ ಬದಿ ಕೈಚೀಲದಲ್ಲಿ ನವಜಾತ ಶಿಶು ಬಿಟ್ಟುಹೋದ ಪಾಪಿಗಳು! - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಬದಿ ಕೈಚೀಲದಲ್ಲಿ ನವಜಾತ ಶಿಶು ಬಿಟ್ಟುಹೋದ ಪಾಪಿಗಳು..!
ರಸ್ತೆಯಲ್ಲಿ ಓಡಾಡುತ್ತಿದ್ದವರು ಗಮನಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನಕುಮಾರಿ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಸ್ಥಳಕ್ಕಾಗಮಿಸಿದ್ದಾರೆ. ಅಲ್ಲದೆ ಹೆಣ್ಣು ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
ಓದಿ:ಶಿವಮೊಗ್ಗದ ಇಬ್ಬರು ಸಚಿವರಿಗೆ ಸಿಕ್ತು ಪ್ರಭಾವಿ ಖಾತೆ : ಜಿಲ್ಲೆಯ ಜನರಿಂದ ಅಭಿವೃದ್ಧಿ ನಿರೀಕ್ಷೆ