ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಪುರಸಭೆ ಅಧಿಕಾರಗಳ ನಿರ್ಲಕ್ಷ್ಯಕ್ಕೆ ವಾರ್ಡ್ಗಳು ಗಬ್ಬು ನಾರುತ್ತಿದೆ. ಪುರಸಭೆ ಚುನಾವಣೆ ನಡೆದು ವರ್ಷಗಳೇ ಉರುಳಿದರೂ ಒಂದನೇ ವಾರ್ಡ್ನ ಸ್ಥಿತಿ ಅದೋಗತಿಯಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ : ಗಬ್ಬು ನಾರುತ್ತಿರುವ ವಾರ್ಡ್ಗಳು! - Negligence Of The Authorities In Chitradurga
ಹೊಳಲ್ಕೆರೆ ಪಟ್ಟಣದಲ್ಲಿ ಪುರಸಭೆ ಅಧಿಕಾರಗಳ ನಿರ್ಲಕ್ಷ್ಯಕ್ಕೆ ವಾರ್ಡ್ಗಳು ಗಬ್ಬು ನಾರುತ್ತಿದೆ. ಪುರಸಭೆ ಚುನಾವಣೆ ನಡೆದು ವರ್ಷಗಳೇ ಉರುಳಿದರೂ ಒಂದನೇ ವಾರ್ಡ್ನ ಸ್ಥತಿ ಅದೋಗತಿಯಾಗಿದೆ.

ಗಬ್ಬು ನಾರುತ್ತಿರುವ ವಾರ್ಡ್ಗಳು
ಕಸ, ಕೊಳಚೆ ನೀರು ಶೇಖರಣೆಯಾಗಿ ಚರಂಡಿಗಳಿಂದ ದುರ್ವಾಸನೆ ಬರುತ್ತಿದೆ. ಈ ಸ್ಥಿತಿಯನ್ನು ಜಿಲ್ಲಾಧಿಕಾರಿ ವಿನೋತ್ ಪ್ರೀಯಾರವರು ಪರಿಶೀಲನೆ ನಡೆಸಿ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು ಕೂಡ ಅಧಿಕಾರಿಗಳು ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ವಾಡ್೯ ಸದಸ್ಯೆಯಾದ ಹೆಚ್.ಆರ್ ನಾಗರತ್ನ ವೇದಮೂರ್ತಿ ಹಲವಾರು ಬಾರಿ ತಾಲ್ಲೂಕು ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಮನವಿ ಮಾಡಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಇದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.