ಚಿತ್ರದುರ್ಗ :ಕೋಟೆನಾಡಿನಲ್ಲಿ ನವ ದುರ್ಗೆಯರ ಮೆರವಣಿಗೆ ಇಂದು ಅತ್ಯಂತ ಸಂಭ್ರಮದಿಂದ ಸಾಗಿತು. ಹೀಗಾಗಿ, ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಾಳೆ ನಡೆಯಲಿದೆ.
ನಗರದಲ್ಲಿ ನಡೆದ ಗಣ ಹೋಮ ಹಾಗೂ ದುರ್ಗಾ ಹೋಮದಲ್ಲಿ ಇದೇ ಪ್ರಥಮ ಬಾರಿಗೆ ಚಿತ್ರದುರ್ಗದ ಎಲ್ಲಾ ಶಕ್ತಿ ದೇವತೆಗಳು ಸಾಕ್ಷಿಯಾದರು. ನೂರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನೆರವೇರಿತು. ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಯಿತು.
ಉಚ್ಚಂಗಿ ಯಲ್ಲಮ್ಮ, ನಗರದೇವತೆ ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕಾಳಿಕಾಮಠೇಶ್ವರಿ, ನಲೆನಾಡು ಚೌಡೇಶ್ವರಿ, ಬಡ್ಡಾಂಬಿಕೆ, ಬನಶಂಕರಮ್ಮ, ದುರ್ಗಾದೇವಿ ಸೇರಿ ಒಂಬತ್ತು ದೇವತೆಗಳು ಪಾಲ್ಗೊಂಡಿದ್ದವು.