ಕರ್ನಾಟಕ

karnataka

ETV Bharat / state

ಜಾತಿ ಧರ್ಮ ಪರಿಗಣಿಸದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಿ: ಎಸ್.ವೈ. ವಟವಟಿ - national voter day celebration

ಚುನಾವಣೆ ಸಂದರ್ಭದಲ್ಲಿ ಮತದಾರರು ಮತ ಚಲಾಯಿಸುವಾಗ ಜಾತಿ, ಧರ್ಮ, ಸಿರಿವಂತಿಕೆಯನ್ನು ಪರಿಗಣಿಸದೆ, ಯೋಗ್ಯ ಎನಿಸುವ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ ವಟವಟಿ ಅವರು ಹೇಳಿದರು.

National Voter Day Celebration in Chitradurga
ಮತ ಚಲಾಯಿಸುವಾಗ ಜಾತಿ ಧರ್ಮ ಪರಿಗಣಿಸದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಿ: ಎಸ್.ವೈ ವಟವಟಿ

By

Published : Jan 26, 2020, 10:32 PM IST

ಚಿತ್ರದುರ್ಗ:ಚುನಾವಣೆ ಸಂದರ್ಭದಲ್ಲಿ ಮತದಾರರು ಮತ ಚಲಾಯಿಸುವಾಗ ಜಾತಿ, ಧರ್ಮ, ಸಿರಿವಂತಿಕೆಯನ್ನು ಪರಿಗಣಿಸದೆ, ಯೋಗ್ಯ ಎನಿಸುವ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ ವಟವಟಿ ಅವರು ಹೇಳಿದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭ

ಜಿಲ್ಲಾಡಳಿತ ಹಾಗೂ ಭಾರತ ಚುನಾವಣಾ ಆಯೋಗದ ಸಹಯೋಗದೊಂದಿಗೆ ನಗರದ ತ.ರಾ.ಸು. ರಂಗಮಂದಿರದಲ್ಲಿಂದು ಏರ್ಪಡಿಸಲಾದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಅನೇಕ ಜಾತಿ, ಧರ್ಮ, ಸಮುದಾಯಗಳನ್ನು ಒಳಗೊಂಡ ಸರ್ವ ಸಮಾನತೆಯ ಗಣರಾಜ್ಯ. ನಮ್ಮಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಮೂರು ಕ್ಷೇತ್ರಗಳ ನ್ಯಾಯದಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆಯೆಂದರು.

ಈ ಮೊದಲು ಚುನಾವಣೆಗಳಲ್ಲಿ ಕೇವಲ ಶೇ. 50 ರಿಂದ 60 ರಷ್ಟು ಮಾತ್ರ ಮತದಾನ ಪ್ರಮಾಣ ದಾಖಲಾಗುತ್ತಿತ್ತು. ಅಲ್ಪ ಪ್ರಮಾಣದ ಮತದಾನ ದಾಖಲಾದ ಸಂದರ್ಭಗಳಲ್ಲಿ ಕೇವಲ ಶೇ.15 ರಿಂದ 20 ರಷ್ಟು ಮತ ಪಡೆದವರು ಚುನಾಯಿತರಾಗುತ್ತಿದ್ದರು. ಈ ರೀತಿ ಆದರೆ ಅದು ಹೇಗೆ ಎಲ್ಲರ ಜನಪ್ರತಿನಿಧಿ ಎನಿಸಿಕೊಳ್ಳಲು ಸಾಧ್ಯ. ಚುನಾವಣೆ, ಮತದಾನ, ಜನಪ್ರತಿನಿಧಿ ಆಯ್ಕೆ ಸರಿಯಾಗಿ ಆಗದಿದ್ದರೆ ಸಂವಿಧಾನದ ಆಶಯ ಈಡೇರಲು ಹೇಗೆ ಸಾಧ್ಯ? ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ABOUT THE AUTHOR

...view details