ಕರ್ನಾಟಕ

karnataka

ETV Bharat / state

ಅಂತರ್ಜಲ, ಅರಣ್ಯ ಅಭಿವೃದ್ಧಿಗೆ ಸಹಕಾರಿ.. ನೂರಾರು ಜನರ ತುತ್ತಿನ ಚೀಲ ತುಂಬಿಸಿದ ಎಂಜಿನಿಯರ್ ಐಡಿಯಾ.. - ನರೇಗಾ ಯೋಜನೆಯ ಯಶಸ್ವಿ ಜಾರಿ

ನರೇಗಾ ಯೋಜನೆಯಲ್ಲಿ ಕೆಲಸ ಕೊಡುವಂತೆ ವಿದ್ಯಾವಂತರು ಪಂಚಾಯತಿಗೆ ಸಂಪರ್ಕಿಸಿದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳು, ಎಂಜಿನಿಯರ್ ಸೇರಿ‌ ದುಡಿವ ಕೈಗಳಿಗೆ ಕೆಲಸ ಕೊಡಲು ಮುಂದಾಗಿದ್ದಾರೆ. ಪಂಚಾಯತಿ ವ್ಯಾಪ್ತಿಯ ಚಿಕ್ಕ ಉಳ್ಳಾರ್ತಿ ಗ್ರಾಮದ ಬೋರೇದೇವರ ದೇವಸ್ಥಾನದ ಬಳಿ ಇರುವ 12 ಎಕರೆ ಜಮೀನಿನಲ್ಲಿ ಕಾಂಟೂರ್ ಬಂಡಿಂಗ್ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ..

Narega Successful impliment in Chitradurga
ನೂರಾರು ಜನರ ತುತ್ತಿನ ಚೀಲ ತುಂಬಿಸಿದ ಎಂಜಿನಿಯರ್ ಐಡಿಯಾ.!

By

Published : Sep 3, 2021, 9:11 PM IST

ಚಿತ್ರದುರ್ಗ :ಉದ್ಯೋಗ ಖಾತ್ರಿ ಯೋಜನೆ ಅಂದ್ರೆನೇ ಅಕ್ರಮಗಳ ಆಗರ ಎಂಬ ಮಾತಿದೆ. ಅಂತಹ ಆರೋಪವನ್ನು ಅಳಿಸಿ ಹಾಕಲು ಇಲ್ಲೊಂದು ಗ್ರಾಮ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಗೆ ಶಕ್ತಿ ತುಂಬಿದೆ.

ನೂರಾರು ಜನರ ತುತ್ತಿನ ಚೀಲ ತುಂಬಿಸಿದ ಎಂಜಿನಿಯರ್ ಐಡಿಯಾ!

ನೀವು ನೋಡ್ತಿರೋ ದ್ರೋಣ್​ ದೃಶ್ಯ ನರೇಗಾ ಯೋಜನೆಯಲ್ಲಿ ಮಾಡಿರುವ ಕಾಂಟೂರ್ ಬಂಡಿಂಗ್ ನಿರ್ಮಾಣದ ಕಾಮಗಾರಿ. ಅಂದಹಾಗೆ ಇಂತಹ ಅದ್ಭುತ ಪರಿಕಲ್ಪನೆ, ಕಾಮಗಾರಿಯ ಕ್ರಿಯಾಯೋಜನೆ ರೂಪಿಸಿದ್ದು‌ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡುಳ್ಳಾರ್ತಿ ಗ್ರಾಮ ಪಂಚಾಯತ್ ಎಂಜಿನಿಯರ್ ರಮೇಶ್ ಮತ್ತು ಸಿಬ್ಬಂದಿ.

ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ಹೋಗಿದ್ದ ಜನ ಕೊರೊನಾ ಸಂಕಷ್ಟ ಕಾಲದಲ್ಲಿ ವಾಪಸ್ ಊರುಗಳಿಗೆ ಬಂದು ನಿರುದ್ಯೋಗಿಗಳಾಗಿದ್ರು. ನರೇಗಾ ಯೋಜನೆಯಲ್ಲಿ ಕೆಲಸ ಕೊಡುವಂತೆ ವಿದ್ಯಾವಂತರು ಪಂಚಾಯತ್‌ಗೆ ಸಂಪರ್ಕಿಸಿದಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳು, ಎಂಜಿನಿಯರ್ ಸೇರಿ‌ ದುಡಿವ ಕೈಗಳಿಗೆ ಕೆಲಸ ಕೊಡಲು ಮುಂದಾಗಿದ್ದಾರೆ. ಪಂಚಾಯತ್ ವ್ಯಾಪ್ತಿಯ ಚಿಕ್ಕ ಉಳ್ಳಾರ್ತಿ ಗ್ರಾಮದ ಬೋರೇದೇವರ ದೇವಸ್ಥಾನದ ಬಳಿ ಇರುವ 12 ಎಕರೆ ಜಮೀನಿನಲ್ಲಿ ಕಾಂಟೂರ್ ಬಂಡಿಂಗ್ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ.

ಇನ್ನು, ಕಾಂಟೂರ್ ಬಂಡಿಂಗ್ ನಿರ್ಮಾಣಕ್ಕೆ ಪ್ರತಿದಿನ ಸುಮಾರು 400 ರಿಂದ 500 ಜನ ಕಾರ್ಮಿಕರು ಕೆಲಸ ಮಾಡಿದ್ದಾರೆ. 30 ರಿಂದ 40 ಜನಕ್ಕೆ ಒಬ್ಬರನ್ನು ಉಸ್ತುವಾರಿಯಾಗಿ ನೇಮಿಸಿ ಜವಾಬ್ದಾರಿ ನೀಡಲಾಗಿತ್ತು. ಇಬ್ಬರು ಕಾರ್ಮಿಕರು ದಿನಕ್ಕೆ ಒಂದು ಗುಂಡಿ ಮುಗಿಸಿ ಒಂದು ಗಿಡ ನೆಡುವ ಗುರಿ ನೀಡಲಾಗಿತ್ತು. ಕಾಮಗಾರಿ ಆರಂಭವಾದಾಗಿನಿಂದ ಈವರೆಗೂ 8350 ಗುಂಡಿ ಮುಗಿಸಿದ್ದು, 6200 ಗಿಡ ನೆಡಲಾಗಿದೆ‌.

ಮಳೆ ಬಂದಮೇಲೆ ಗುಂಡಿಯಲ್ಲಿ ನೀರು ನಿಂತು ಅಂತರ್ಜಲ ಮಟ್ಟ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಪಂಚಾಯತ್ ಎಂಜಿನಿಯರ್ ರಮೇಶ್. ಗ್ರಾಮೀಣ ಭಾಗದಲ್ಲಿ ದುಡಿವ ಕೈಗಳಿಗೆ ಕೆಲಸ ಕೊಡುವ ಜೊತೆಗೆ ಉತ್ತಮ ಪರಿಸರ, ಅಂತರ್ಜಲ ಹೆಚ್ಚಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

ABOUT THE AUTHOR

...view details