ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ಅವರ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾ ಪತ್ರ ಕಳುಹಿಸಿದ್ದಾರೆ.
ಸಚಿವ ಶ್ರೀರಾಮುಲು ಅವರ ಮಗಳ ಮದುವೆಗೆ ನಮೋ ಅಭಿನಂದನ ಪತ್ರ - hitradurgha news
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರ ಮಗಳ ಮದುವೆಗೆ ಆಹ್ವಾನಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನ ಪತ್ರ ಕಳುಹಿಸಿದ್ದಾರೆ.
ಮಾರ್ಚ್ 05 ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ನೆರವೇರಲಿದ್ದು, ಮದುವೆಯಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಚಿವ ಶ್ರೀ ರಾಮುಲು ಆಹ್ವಾನಿಸಿದ್ದರು.
ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಮದುವೆ ಸಮೃದ್ಧಿ ಮತ್ತು ಅದ್ಭುತ ಹಂಚಿಕೆಯ ಅನುಭವಗಳಿಂದ ತುಂಬಿರಲಿ. ಮದುವೆಯಲ್ಲಿ ಸಂಭ್ರಮ, ಸಂತೋಷ ಮನೆಮಾಡಿರಲಿ. ಅದರಲ್ಲಿ ನಾನು ಪಾಲ್ಗೊಳ್ಳಬೇಕೆಂದು ಬಯಸುತ್ತೇನೆ. ಮದುವೆಯಾಗುತ್ತಿರುವವರು ತಮ್ಮ ಜೀವನದಲ್ಲಿ ಈ ಹೊಸ ಹಂತವನ್ನು ಆರಂಭಿಸುತ್ತಿದ್ದಾರೆ. ಈ ಪ್ರಯಾಣವು ಸಂತೋಷದಿಂದ ಮುಂದುವರಿಯಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಈ ವಿಶೇಷ ಸಂದರ್ಭದಲ್ಲಿ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ರಕ್ಷಿತಾ ಹಾಗೂ ಸಂಜೀವ ರೆಡ್ಡಿ ಮತ್ತು ಕುಟುಂಬ, ಸ್ನೇಹಿತರು ಪ್ರೀತಿಪಾತ್ರರನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಪತ್ರ ಬರೆದಿದ್ದಾರೆ.