ಚಿತ್ರದುರ್ಗ: ರಾಜ್ಯದಲ್ಲಿ ಯಾರಾದ್ರು ಒಬ್ಬ ಬಫೂನ್ ಇದ್ರೆ ಅದು ನಳಿನ್ ಕುಮಾರ್ ಕಟೀಲ್ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಿಚಾಯಿಸಿದರು.
ಚಿರ್ತದುರ್ಗ ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡದೆ ಇರುವ ಪಕ್ಷದ ನಾಯಕರು ನಮ್ಮವರ ವಿರುದ್ಧ ಮಾತನಾಡ್ತಾರೆ ಎಂಬ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಂಸದ, ಸದಸ್ಯನಾಗಿ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದು ಗೊತ್ತಿಲ್ಲದ, ಸಂವಿಧಾನದ ಅರಿವು ಇಲ್ಲದ ಕಟೀಲ್, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಸಮಾಜಕ್ಕೆ ಬೆಂಕಿ ಹಚ್ಚುವ ಕಟೀಲ್ ನಮ್ಮ ಬಗ್ಗೆ ಮಾತನಾಡುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದರು.
ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಇದ್ದವರು ಹಾಗೂ ಹೊಸದಾಗಿ ಪಕ್ಷಕ್ಕೆ ಬಂದವರ ಮಧ್ಯೆ ನಡೆಯುತ್ತಿರುವ ಸಂಘರ್ಷವನ್ನು ಮೊದಲು ಸರಿಪಡಿಸಿಕೊಳ್ಳಿ. ಹೊಸದಾಗಿ ಬಿಜೆಪಿಗೆ ಸೇರಿದ ಎಂ ಎಲ್ ಎ ಗಳು ಸದಸ್ಯರಾಗಿದ್ದಾರೋ ಇಲ್ವೋ ಗೊತ್ತಿಲ್ಲ ಎಂದು ಗೇಲಿ ಮಾಡಿದರು. ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳನ್ನು ಮಾಡಿದ್ದೀರಲ್ಲಾ, ಅವರಿಗೆಷ್ಟು ಗೊತ್ತಿದೆ ಬಿಜೆಪಿ ಸಿದ್ಧಾಂತಗಳ ಬಗ್ಗೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಎಎಪಿ ಪಕ್ಷದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿ, ದೇಶದ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ದೆಹಲಿ ಜಾತ್ಯತೀತ ಮತಗಳು ತಡೆದಿದ್ದಾರೆ, ನಾವು ದೆಹಲಿಯಲ್ಲಿ ಸೋಲಬಾರದಿತ್ತು, ಅದ್ರು ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಎಎಪಿ ಎರಡು ಪಕ್ಷಗಳನ್ನು ಸೋಲಿಸುತ್ತೇವೆ ಎಂದು ಭವಿಷ್ಯ ನುಡಿದರು.