ಚಿತ್ರದುರ್ಗ: ಕಾಂಗ್ರೆಸ್-ಜೆಡಿಎಸ್ ಸೇರಿ ರಾಜ್ಯ ಲೂಟಿ ಮಾಡುತ್ತಿದ್ದಾರೆಂದು ಬೇಸತ್ತ 17 ಜನ ಶಾಸಕರು ನಮ್ಮ ಬಳಿ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸಮ್ಮಿಶ್ರ ಸರ್ಕಾರವನ್ನು ನೆನೆದರು.
ಕಾಂಗ್ರೆಸ್-ಜೆಡಿಎಸ್ ರಾಜ್ಯ ಲೂಟಿ ಹಿನ್ನೆಲೆಯಲ್ಲಿ 17 ಜನ ಬಿಜೆಪಿಗೆ ಬಂದ್ರು: ಕಟೀಲ್ - ಮಿಣಿ ಮಿಣಿ ಪೌಡರ್ ಕುರಿತು ನಳಿನ್ಕುಮಾರ ಪ್ರತಿಕ್ರಿಯೆ
ಮೈತ್ರಿ ಸರ್ಕಾರದ ಸಂದರ್ಭದಲ್ಲಿ ರಾಜ್ಯ ಲೂಟಿ ಮಾಡುತ್ತಿದ್ದಾರೆಂದು ಬೇಸತ್ತ 17 ಜನ ಶಾಸಕರು ನಮ್ಮ ಬಳಿ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಚಾಟಿ ಬೀಸಿದ್ದಾರೆ.
![ಕಾಂಗ್ರೆಸ್-ಜೆಡಿಎಸ್ ರಾಜ್ಯ ಲೂಟಿ ಹಿನ್ನೆಲೆಯಲ್ಲಿ 17 ಜನ ಬಿಜೆಪಿಗೆ ಬಂದ್ರು: ಕಟೀಲ್ naleenkumar-katil-statement-on-congress-jds](https://etvbharatimages.akamaized.net/etvbharat/prod-images/768-512-6015571-thumbnail-3x2-bjp.jpg)
ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕೈ ಪಕ್ಷವನ್ನು ಛೇಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಹುಡುಕಿದರೂ ಸಿಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಒಡೆದ ಮನೆಂಯತಾಗಿದ್ದು, ಡಿಕೆಶಿ ಅಧ್ಯಕ್ಷರಾದರೆ ಸಿದ್ಧರಾಮಯ್ಯ ಒಪ್ಪಲ್ಲ, ಸಿದ್ಧರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಡಿಕೆಶಿ ಒಪ್ಪಲ್ಲ. ಯಾರನ್ನೇ ಕೆಪಿಸಿಸಿ ಅದ್ಯಕ್ಷರಾಗಿ ಆಯ್ಕೆ ಮಾಡಿದರೂ ಸಿದ್ಧರಾಮಯ್ಯ ಪಕ್ಷ ಬಿಡ್ತಾರೆ. ಆದರೆ ಅವರಿಂದ ರಾಜ್ಯಾದ್ಯಕ್ಷರ ಆಯ್ಕೆ ಮಾಡಲು ಮಾತ್ರ ಆಗ್ತಿಲ್ಲ. ಇನ್ನು ಹತ್ತು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಾಗಲ್ಲ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಜನ ಬಿ.ಎಸ್.ಯಡಿಯೂರಪ್ಪರನ್ನು ಬಯಸುತ್ತಾರೆ. ಬಿಎಸ್‌ವೈ ರಾಜ್ಯದ ಜನರ ಕಣ್ಣೀರು ಒರೆಸುವ ಸಿಎಂ ಆದರೆ. ಇತ್ತ ಹೆಚ್‌ಡಿಕೆ ರಾಜ್ಯದ ಮನೆಮನೆಗೆ ಹೋಗಿ ಕಣ್ಣೀರು ಹಾಕುವ ಸಿಎಂ ಆಗಿದ್ದಾರೆ. ಹೆಸರು ಪ್ರಸ್ತಾಪಿಸದೆ ಹೆಚ್‌ಡಿಕೆ ಬಗ್ಗೆ ಮಿಣಿ ಮಿಣಿ ಎಂದು ನಳೀನ್ ಕುಮಾರ್ ಕಟೀಲ್ ವ್ಯಂಗವಾಡಿದರು.