ಕರ್ನಾಟಕ

karnataka

ETV Bharat / state

ಹೊಳಲ್ಕೆರೆ ಶಾಸಕರ ವಿರುದ್ಧ ಸದಾಶಿವ ಆಯೋಗ ವರದಿ ಹೋರಾಟ ಸಮಿತಿ ಆಕ್ರೋಶ - ಇತ್ತೀಚಿನ ಹೊಳಲ್ಕೆರೆ ಸುದ್ದಿಗಳು

ದೇಶದಲ್ಲಿ ಎಲ್ಲೆಂದರಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ನಮ್ಮ ಸಮಾಜಕ್ಕೆ ಸಿಗಬೇಕಾದ ನ್ಯಾಯ ಇನ್ನೂ ಸಿಕ್ಕಿಲ್ಲ ಆದ್ದರಿಂದ ನ್ಯಾ. ಸದಾಶಿವ ಆಯೋಗದ ಶಿಫಾರಸ್ಸುಗಳು ಜಾರಿ ಆಗಬೇಕೆಂದು ಮುತ್ತಣ್ಣ ಬೆಣ್ಣೂರ ಒತ್ತಾಯಿಸಿದ್ದಾರೆ.

ಮುತ್ತಣ್ಣ ಬೆಣ್ಣೂರ

By

Published : Oct 30, 2019, 8:42 PM IST

ಚಿತ್ರದುರ್ಗ: ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ವಿರುದ್ಧ ನ್ಯಾ. ಸದಾಶಿವ ಆಯೋಗ ವರದಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಮಾತನಾಡಿದ್ದ ಚಂದ್ರಪ್ಪ, ಯಾವುದೇ ಕಾರಣಕ್ಕೂ ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿದ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.

ಮುತ್ತಣ್ಣ ಬೆಣ್ಣೂರ

ದೇಶದಲ್ಲಿ ಎಲ್ಲೆೆಂದರಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ನಮ್ಮ ಸಮಾಜಕ್ಕೆ ಸಿಗಬೇಕಾದ ನ್ಯಾಯ ಇನ್ನೂ ಸಿಕ್ಕಿಲ್ಲ ಆದ್ದರಿಂದ ನ್ಯಾ. ಸದಾಶಿವ ಆಯೋಗ ಜಾರಿ ಆಗಬೇಕೆಂದು ಒತ್ತಾಯಿಸಿದ್ದಾರೆ ಬೆಣ್ಣೂರ ಆಗ್ರಹಿಸಿದ್ದಾರೆ. ಚುನಾವಣೆಗೆ ಮೊದಲು ಚಂದ್ರಪ್ಪ ಅನೇಕ ಆಶ್ವಾಸನೆಗಳನ್ನು ನೀಡಿದ್ದರು. ಅದ್ಯಾವುದನ್ನೂ ಅವರು ಈಡೇರಿಸಿಲ್ಲ. ಈ ಮೊದಲು ಶಾಸಕರು ಸದಾಶಿವ ಆಯೋಗ ಜಾರಿತರಲು ಹೋರಾಡುವುದಾಗಿ ಹೇಳಿದ್ದರು. ಆದರೆ ಇದೀಗ ಜನರನ್ನು ದಿಕ್ಕು ಪಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ABOUT THE AUTHOR

...view details