ಕರ್ನಾಟಕ

karnataka

ETV Bharat / state

ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಮಠ-ಮಾನ್ಯಗಳು ಕಾರಣ : ಸಿಎಂ ಬಿ ಎಸ್ ಯಡಿಯೂರಪ್ಪ - ಶಿವಮೂರ್ತಿ ಮುರುಘಾ ಶ್ರೀ

ಮುರುಘಾ ಮಠವನ್ನು ಜಾತ್ಯಾತೀತ ಮಠವಾಗಿಸಿದ ಹಿರಿಮೆ ಶಿವಮೂರ್ತಿ ಮುರುಘಾ ಶ್ರೀಗಳದ್ದಾಗಿದೆ. ಈ ಮಠ ಬಸವ ಪುತ್ಥಳಿ ನಿರ್ಮಾಣ ಯೋಜನೆಗೆ ಕೈ ಹಾಕಿದ್ದು, ಇದು ವಿಶ್ವದ ಗಮನ ಸೆಳೆಯಲಿದೆ..

bs yediyurappa
ಬಿ.ಎಸ್. ಯಡಿಯೂರಪ್ಪ

By

Published : Nov 29, 2020, 4:20 PM IST

ಚಿತ್ರದುರ್ಗ: ಮಠ, ಮಾನ್ಯಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿವೆ. ಬಸವಣ್ಣನವರ ಅನುಭವ ಮಂಟಪ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮುರುಘಾ ಮಠ ಬಗ್ಗೆ ಗುಣಗಾನ ಮಾಡಿದರು.

ಮುರುಘಾ ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ..

ಚಿತ್ರದುರ್ಗದ ಹೊರವಲಯದಲ್ಲಿರುವ ಮುರುಘಾ ಮಠದ ಆವರಣದಲ್ಲಿ ಮುರುಘಾ ಮ್ಯೂಸಿಯಂ ಲೋಕಾರ್ಪಣೆ‌ ಮಾಡಿದ‌ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ‌ ಅವರು, ಮುರುಘಾ ಮಠವನ್ನು ಜಾತ್ಯಾತೀತ ಮಠವಾಗಿಸಿದ ಹಿರಿಮೆ ಶಿವಮೂರ್ತಿ ಮುರುಘಾ ಶ್ರೀಗಳದ್ದಾಗಿದೆ. ಈ ಮಠ ಬಸವ ಪುತ್ಥಳಿ ನಿರ್ಮಾಣ ಯೋಜನೆಗೆ ಕೈ ಹಾಕಿದ್ದು, ಇದು ವಿಶ್ವದ ಗಮನ ಸೆಳೆಯಲಿದೆ ಎಂದರು.

ABOUT THE AUTHOR

...view details