ಚಿತ್ರದುರ್ಗ:ಮುರುಘಾ ಮಠದಲ್ಲಿ 47 ಫೋಟೋಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಠದ ಫೋಟೋ ಕಳ್ಳತನಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಿಚಾರಣೆ ನಡೆಯುತ್ತಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರಿಂದ ಬಸವರಾಜನ್ ವಿಚಾರಣೆ ನಡೆಯುತ್ತಿದೆ. ಮುರುಘಾ ಮಠದಲ್ಲಿನ ಫೋಟೋ ಕಳ್ಳತನ ಪ್ರಕರಣ ಸಂಬಂಧ ಆಡಿಯೋ ಬಗ್ಗೆ ವಿರಕ್ತ ಮಠದ ಬಸವಪ್ರಭು ಶ್ರೀಗಳು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದರು. ಫೋಟೋ ಕಳ್ಳತನದ ಬಗ್ಗೆ ವೈರಲ್ ಆದ ಆಡಿಯೋವೊಂದರ ಬಗ್ಗೆ ದೂರಿನಲ್ಲಿ ತಿಳಿಸಿದ್ದರು.