ಕರ್ನಾಟಕ

karnataka

ETV Bharat / state

ಮೂಢನಂಬಿಕೆ ವಿರುದ್ಧ ಸಮರ: ಅಮಾವಾಸ್ಯೆ  ದಿನ ಜನಿಸಿದ ಮಕ್ಕಳಿಗೆ ಮುರುಘಾ ಶ್ರೀ ಕೊಟ್ಟ ಗಿಫ್ಟ್​ ಏನು? - ಮಹಾಲಯ ಅಮವಾಸ್ಯೆ

ಜನರಲ್ಲಿ ಅಮಾವಾಸ್ಯೆ ಬಗ್ಗೆ ಇರುವ ಮೌಢ್ಯತೆಯನ್ನು ಬದಲಾಯಿಸುವ ದೃಷ್ಟಿಯಿಂದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಹಾಲಯ ಅಮವಾಸ್ಯೆ ದಿನ ಜನಿಸಿದ ಒಂಭತ್ತು ಮಕ್ಕಳಿಗೆ ಆಶೀರ್ವದಿಸಿ, ಪೋಷಕರು ಒಪ್ಪಿದ್ರೇ ಮುರುಘಾ ಮಠದ ವತಿಯಿಂದ ಈ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮುರುಘಾ ಶರಣರು

By

Published : Sep 28, 2019, 7:58 PM IST

ಚಿತ್ರದುರ್ಗ :ಮೌಢ್ಯತೆ ಬಗ್ಗೆ ಸದಾ ಸಮರ ಸಾರುತ್ತ ಜನರಿಗೆ ಅಮಾವಸ್ಯೆ ಬಗ್ಗೆ ಅರಿವನ್ನು ಮೂಡಿಸುತ್ತಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಹಾಲಯ ಅಮವಾಸ್ಯೆ ದಿನ ಜನಿಸಿದ ಒಂಭತ್ತು ಮಕ್ಕಳಿಗೆ ಆಶೀರ್ವದಿಸಿ, ಬಾಣಾಂತಿಯರಿಗೆ ಹಾಗೂ ಜನಿಸಿದ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಿದರು.

ಅಮಾವಾಸ್ಯೆ ದಿನ ಜನಿಸಿದ ಮಕ್ಕಳಿಗೆ ಭರ್ಜರಿ ಗಿಫ್ಟ್ ನೀಡಿದ ಮುರುಘಾ ಶರಣರು

ಬಳಿಕ ಮಾತನಾಡಿದ ಅವರು. ಅಮಾವಾಸ್ಯೆ ದಿನ (ಇಂದು) ಜನಿಸಿದ ಒಂಭತ್ತು ಶಿಶುಗಳಿಗೆ ಪೋಷಕರು ಒಪ್ಪಿದ್ರೇ ಮುರುಘಾ ಮಠದ ವತಿಯಿಂದ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು. ಹುಣ್ಣಿಮೆ ಎಂಬುದು ಪ್ರಾಕೃತಿಕವಾದ ಸಹಜ ಪ್ರಕ್ರಿಯೆ , ಹೀಗಾಗಿ ಯಾವ ದಿನವೂ ಅಶುಭ ಎಂದು ಜನರು ಭಾವಿಸಬಾರದು ಎಂದು ತಿಳಿಸಿದರು. ಇನ್ನು ಇಂದು 5 ಗಂಡು ಹಾಗೂ 4 ಹೆಣ್ಣು ಮಕ್ಕಳು ಜನ್ಮ ತಾಳಿದ್ದು, ಉಚಿತ ಶಿಕ್ಷಣ ನೀಡುವ ಕಾರ್ಯ ಬೇರೆಯವರಿಗೆ ಪ್ರೇರಣೆಯಾಗಬೇಕು ಎಂಬದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ABOUT THE AUTHOR

...view details