ಚಿತ್ರದುರ್ಗ:ಕೊರೊನಾ ವಿರುದ್ಧ ಹೋರಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ತಮ್ಮ ಮನೆಯಲ್ಲಿ ಭಾನುವಾರ ರಾತ್ರಿ ದೀಪ ಬೆಳಗಿಸಿ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿ ಎಂದಿದ್ದಾರೆ. ಈ ಹಿನ್ನೆಲೆ ಇಲ್ಲಿನ ಮುರುಘಾ ಮಠದ ಮುರುಘಾ ಶರಣರು ಪ್ರಧಾನಿಯ ಕರೆಗೆ ಸಾಥ್ ನೀಡಿದ್ದಾರೆ.
ದೀಪಾ ಬೆಳಗುವಂತೆ ಪ್ರಧಾನಿ ಮೋದಿ ಕರೆಗೆ ಮುರುಘಾ ಶರಣರು ಸಾಥ್ - pm narendra modi
ಕೊರೊನಾ ವಿರುದ್ಧ ಹೋರಾಡಲು ಒಗ್ಗಟ್ಟಿನ ಪ್ರದರ್ಶನ ನೀಡಬೇಕಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಮನೆಯಲ್ಲಿ ದೀಪ ಬೆಳಗುವಂತೆ ಕರೆ ನೀಡಿದ್ದಾರೆ.
![ದೀಪಾ ಬೆಳಗುವಂತೆ ಪ್ರಧಾನಿ ಮೋದಿ ಕರೆಗೆ ಮುರುಘಾ ಶರಣರು ಸಾಥ್ Muruga Saran swamy supports for PM Modi's call for Deepa's death](https://etvbharatimages.akamaized.net/etvbharat/prod-images/768-512-6660061-929-6660061-1586001417287.jpg)
ದೀಪಾ ಬೆಳುಗುವಂತೆ ಪ್ರಧಾನಿ ಮೋದಿ ಕರೆಗೆ ಮುರುಘಾ ಶರಣರು ಸಾಥ್
ದೀಪಾ ಬೆಳುಗುವಂತೆ ಪ್ರಧಾನಿ ಮೋದಿ ಕರೆಗೆ ಮುರುಘಾ ಶರಣರ ಸಾಥ್
ಮೋದಿಯವರ ಕರೆಗೆ ರಾಜ್ಯ ಹಾಗೂ ರಾಷ್ಟ್ರದ ಜನರು ಸ್ಪಂದಿಸಬೇಕಿದೆ. ಇದ್ರಿಂದ ನಮ್ಮ ಒಗ್ಗಟ್ಟು ತೋರಿಸಬೇಕಿದೆ, ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಜಾಗೃತಿ ಮೂಡಿಸಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ತಮ್ಮ ತಮ್ಮ ಜೀವವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಆದ್ದರಿಂದ ತಾವೆಲ್ಲರೂ ನಾಳಿನ ಕರೆಗೆ ಸ್ಪಂದಿಸಬೇಕಿದೆ. ಮೋದಿಯವರ ಕರೆಯನ್ನು ಬೆಂಬಲಿಸುವಂತೆ ಮುರುಘಾ ಶರಣರು ಜನರಲ್ಲಿ ಮನವಿ ಮಾಡಿದ್ದಾರೆ.