ಚಿತ್ರದುರ್ಗ:ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗುವುದರಲ್ಲಿ ಹಲವು ಹೋರಾಟಗಾರರ ಶ್ರಮವಿದೆ. ಅನೇಕ ಮುಖ್ಯಮಂತ್ರಿಗಳ ಕೊಡುಗೆ ಇದೆ, ಆದ್ರೆ ಇತ್ತೀಚಿಗೆ ಆಯ್ಕೆಯಾದ ಸಂಸದರು ಯೋಜನೆಯನ್ನು ಎದುರು ಇಟ್ಟುಕೊಂಡು ಪೋಸ್ ಕೊಡ್ತಾ ಇದ್ದಾರೆ ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ವಿರುದ್ಧ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ವಾಗ್ದಾಳಿ ನಡೆಸಿದರು.
ಭದ್ರಾ ಯೋಜನೆಗೆ ತಾವೇ ಕಾರಣ ಎಂದು ಪೋಸ್ ಕೊಡ್ತಿದ್ದಾರೆ: ಹಾಲಿ ಸಂಸದರ ವಿರುದ್ಧ ಮಾಜಿ ಸಂಸದ ಗರಂ - B N Chandrappa outraged
ಮಾಜಿ ಶಾಸಕರು, ಸಂಸದರು, ನೀರಾವರಿ ಹೋರಾಟಗಾರರ ಪರಿಶ್ರಮದ ಫಲದಿಂದ ಭದ್ರಾ ಯೋಜನೆ ಜಾರಿಗೆ ಬಂದಿದೆ. ಆದ್ರೆ ಇತ್ತೀಚಿಗೆ ಆಯ್ಕೆಯಾದ ಸಂಸರು ತಾವೇ ಮಾಡಿದ್ದಾಗಿ ಪೋಸು ಕೊಡ್ತಿದ್ದಾರೆ ಎಂದು ಮಾಜಿ ಸಂಸದ ಬಿಎನ್ ಚಂದ್ರಪ್ಪ ಆಕ್ರೋಶ ಹೊರಹಾಕಿದರು.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮಾಜಿ ಶಾಸಕರು, ಸಂಸದರು, ನೀರಾವರಿ ಹೋರಾಟಗಾರರ ಪರಿಶ್ರಮದ ಫಲದಿಂದ ಭದ್ರಾ ಯೋಜನೆ ಜಾರಿಗೆ ಬಂದಿದೆ. ಆದ್ರೆ ಇತ್ತೀಚಿಗೆ ಆಯ್ಕೆಯಾದ ಜಿಲ್ಲೆಯ ಬಗ್ಗೆ ಏನೂ ಅರಿಯದ ಹಾಲಿ ಸಂಸದರು ಭದ್ರಾ ನೀರನ್ನು ತಾವೇ ಜಿಲ್ಲೆಗೆ ತಂದಿರುವುದಾಗಿ ಜಾಹೀರಾತು ನೀಡುತ್ತಿದ್ದಾರೆ. ಜೊತೆಗೆ ಜಿಲ್ಲೆಯ ಜನರು ಅಳುತ್ತಿರುವಾಗ ಅವರು ನಗುವ ಭಾವಚಿತ್ರ ಹಾಕಿಸಿಕೊಂಡು ಮೆರೆಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇನ್ನೂ ಯಾರದೋ ಶ್ರಮದ ಫಲವನ್ನ ತಮ್ಮದೇ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬದ್ದತೆ ಇದ್ದರೆ ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆಗೆ ಸೇರಿಸಲಿ ಎಂದು ಸವಾಲ್ ಹಾಕಿದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಡಳಿತ ವೈಖರಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಹೋರಾಟದ ಮೂಲದಿಂದ ರಾಜಕೀಯಕ್ಕೆ ಬಂದ ಸಿಎಂ ಬಿಎಸ್ವೈಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ನೆರೆ ಪೀಡಿತ ಸಂತ್ರಸ್ತರಿಗೆ ಹತ್ತು ಪೈಸೆ ಪರಿಹಾರ ಕೂಡ ತಲುಪಿಲ್ಲ ಎಂದರು.