ಚಿತ್ರದುರ್ಗ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಇಡಿ ಪ್ರಕರಣದಲ್ಲಿ ಗೆದ್ದು ಬರಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಶುಭ ಹಾರೈಸಿದರು.
ಇಡಿ ಪ್ರಕರಣದಲ್ಲಿ ಡಿಕೆಶಿ ಗೆದ್ದು ಬರಲಿ: ಸಂಸದ ರಾಘವೇಂದ್ರ - MP B.Y Ragavendra talk about DKS arrest
ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬಂಧನದ ವಿಚಾರವಾಗಿ ಸಂತೋಷ ಪಡುವ ಸಂದರ್ಭವೂ ಅಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಬಂಧನ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಡಿಕೆಶಿಯವರಿಗೆ ಬಂಧನದಿಂದ ನೋವಾಗಿದೆ. ನೋವಾದಾಗ ಹೇಳಿಕೆ ನೀಡುವುದು ಸಹಜ. ಕಾನೂನಿನ ಮೂಲಕ ಹೋರಾಟ ನಡೆಸಬಹುದಾಗಿದೆ ಎಂದರು.
ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬಂಧನದ ವಿಚಾರವಾಗಿ ಸಂತೋಷ ಪಡುವ ಸಂದರ್ಭವಲ್ಲ. ವಿಜೃಂಭಣೆ ಮಾಡುವ ಸಂದರ್ಭ ಕೂಡ ಅಲ್ಲ. ಇಡಿ, ಐಟಿಗಳು ಇಂಡಿಪೆಂಡೆಂಟ್ ಸಂಸ್ಥೆಗಳಾಗಿವೆ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಎರಡು ಸಂಸ್ಥೆಗಳು ಸ್ವತಂತ್ರವಾಗಿ ನಿರ್ವಹಣೆ ಮಾಡುತ್ತಿವೆ ಎಂದರು.