ಕರ್ನಾಟಕ

karnataka

ETV Bharat / state

10 ತಿಂಗಳ ಕರುಳ ಬಳ್ಳಿಯನ್ನು ಟಬ್​​ನಲ್ಲಿ ಮುಳುಗಿಸಿ ಕೊಂದು, ನೇಣಿಗೆ ಶರಣಾದ ತಾಯಿ - ಚಿತ್ರದುರ್ಗ ಐನಳ್ಳಿ ಮಗು ತಾಯಿ ಆತ್ಮಹತ್ಯೆ

ಮಗುವನ್ನು ನೀರಲ್ಲಿ ಮುಳುಗಿಸಿ ಕೊಂದು, ತಾಯಿಯೂ ನೇಣಿಗೆ ಶರಣಾದ ಮನ ಕಲಕುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ.

mother-killed-daughter-in-chitradurga-inalli
ಚಿತ್ರದುರ್ಗ ಐನಳ್ಳಿ ಮಗು ತಾಯಿ ಆತ್ಮಹತ್ಯೆ

By

Published : Feb 25, 2020, 2:01 PM IST

ಚಿತ್ರದುರ್ಗ: ಮಗುವನ್ನು ನೀರಲ್ಲಿ ಮುಳುಗಿಸಿ ಕೊಂದು, ತಾಯಿಯೂ ನೇಣಿಗೆ ಶರಣಾದ ಮನ ಕಲಕುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ.

ಐನಳ್ಳಿ ಗ್ರಾಮದ ಆಶಾಬಾಯಿ(24) ಮಗು ಹತ್ಯೆ ಮಾಡಿ ಸಾವಿಗೆ ಶರಣಾದ ತಾಯಿ. ಎರಡು ವರ್ಷಗಳ ಹಿಂದೆ ಹೊಳಲ್ಕೆರೆ ತಾಲೂಕಿನ ಲಂಬಾಣಿ ಹಟ್ಟಿಯ ನಿವಾಸಿ ಹೇಮಂತ್​ ಎಂಬುವವರ ಜತೆ ಪ್ರೇಮ ವಿವಾಹವಾಗಿದ್ದ ಆಶಾ ಬಾಯಿ, ಹೆರಿಗೆ ಬಳಿಕ ಉಂಟಾದ ಆನಾರೋಗ್ಯದ ಕಾರಣ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎನ್ನಲಾಗಿದೆ.

10 ತಿಂಗಳ ಮಗುವನ್ನು ಕೊಂದು ನೇಣಿಗೆ ಶರಣಾದ ತಾಯಿ

ನೋವು ತಾಳಲಾರದೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದ ಆಶಾಬಾಯಿ, ಮಗಳು ಅನಾಥಳಾಗುತ್ತಾಳೆ ಅಂತ ಡೆತ್​ ನೋಟ್​ ಬರೆದಿಟ್ಟು, 10 ತಿಂಗಳ ಹೆಣ್ಣುಮಗುವನ್ನು ನೀರಿನ ಟಬ್​ನಲ್ಲಿ ಮುಳುಗಿಸಿ ಸಾಯಿಸಿ ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಪ್ರಕರಣ ಚಿಕ್ಕಜಾಜೂರು ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

ABOUT THE AUTHOR

...view details