ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು: ಪತಿ ಮೇಲೆ ಅನುಮಾನ - Mother and two children deat case

ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಚಿತ್ರದುರ್ಗದ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.

Mother and two children drown in lake at chitradurga
Mother and two children drown in lake at chitradurga

By

Published : Dec 16, 2022, 8:07 PM IST

ಚಿತ್ರದುರ್ಗದ ತಾಯಿ ಮತ್ತು ಮಕ್ಕಳ ಸಾವು ಪ್ರಕರಣ

ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ದುರ್ಗಮ್ಮ(25), ಮಗ ಅಜ್ಜಯ್ಯ(6) ಹಾಗು ಪುತ್ರಿ ಸೇವಂತಿ(4) ಮೃತ ದುರ್ದೈವಿಗಳು.

ಬೋಸೇದೇವರಹಟ್ಟಿಯಲ್ಲಿನ ಜಾತ್ರೆಯ ನಿಮಿತ್ತ ಪತಿ ಮಹಾಂತೇಶ ತನ್ನ ಪತ್ನಿ ಮತ್ತು ಮಕ್ಕಳಸಮೇತ ಸಂಬಂಧಿಕರ ಮನೆಗೆ ಬಂದಿದ್ದಾನೆ. ಗಂಗಾ ಪೂಜೆ ಇದೆಯೆಂದು ಹೇಳಿ ಪತ್ನಿ ಮತ್ತು ಮಕ್ಕಳನ್ನು ಸಮೀಪದ ನಾಯಕನಹಟ್ಟಿ ಹಿರೇಕೆರೆಗೆ ಕರೆದೊಯ್ದಿದ್ದಾನೆ. ಈ ಸಂದರ್ಭದಲ್ಲಿ ಘಟನೆ ನಡೆದಿದೆ.

ಮಹಾಂತೇಶನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ದುರ್ಗಮ್ಮಳ ಶವ ಪತ್ತೆಯಾಗಿದೆ. ಮಕ್ಕಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದೆ. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ:ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು

ABOUT THE AUTHOR

...view details