ಚಿತ್ರದುರ್ಗ: ರಾತ್ರೋರಾತ್ರಿ ದುಷ್ಕರ್ಮಿಗಳು 1 ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
1 ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು: ಸಂಕಷ್ಟದಲ್ಲಿ ಅನ್ನದಾತ - Chitradurga farmer news
ಹೊಸದುರ್ಗ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಹಾಕಿದ್ದ 1 ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದು, ಅನ್ನದಾತ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು
ಲಕ್ಷಾಂತರ ರೂ. ಖರ್ಚು ಮಾಡಿ ಕಂಠಾಪುರ ಗ್ರಾಮದ ನಿವಾಸಿ ರಂಗನಾಥ್ ಎಂಬುವರು ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಯಾರೋ ಕಿಡಿಗೇಡಿಗಳು ರಾತ್ರಿ 1 ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದು, ಅನ್ನದಾತ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಹೆತ್ತ ಮಕ್ಕಳ ರೀತಿಯಲ್ಲಿ ಗಿಡಗಳನ್ನು ಸಾಕಿದ್ದು, ಈಗ ನೆಲಸಮವಾಗಿರುವುದನ್ನು ನೋಡಿ ರೈತ ರಂಗನಾಥ್ ಸಂಕಟ ಅನುಭಸುತ್ತಿದ್ದಾರೆ. ಅಲ್ಲದೆ, ಈ ದುಷ್ಕರ್ಮಿಗಳು ಮಾಡಿದ ಕೆಲಸಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.