ಕರ್ನಾಟಕ

karnataka

ETV Bharat / state

ಅಧಿಕಾರಿಗಳು ಇಲ್ಲ, ಜಿಪಂ ಸದಸ್ಯರು ಇಲ್ಲದ ಮೇಲೆ ಕೆಡಿಪಿ ಸಭೆ ಯಾರಿಗಾಗಿ!? - ಚಿತ್ರದುರ್ಗದಲ್ಲಿ ಮಾಸಿಕ ಪ್ರಗತಿ ಪರಿಶೀಲನ ಸಭೆ

ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸುತ್ತಾರೆ. ಆದರೆ, ಚಿತ್ರದುರ್ಗದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸದಸ್ಯರು ಗೈರಾಗಿರೋದು ಎದ್ದು ಕಾಣುತಿತ್ತು.

Monthly Progress Review Meeting
ಮಾಸಿಕ ಪ್ರಗತಿ ಪರಿಶೀಲನ ಸಭೆ:ಅಧಿಕಾರಿಗಳು ಹಾಗೂ ಸದಸ್ಯರು ಗೈರು

By

Published : Feb 11, 2020, 7:44 PM IST

ಚಿತ್ರದುರ್ಗ:ಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸುತ್ತಾರೆ. ಆದರೆ, ಚಿತ್ರದುರ್ಗದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಇದಕ್ಕೆ ತದ್ವಿರುದ್ಧ.

ಮಾಸಿಕ ಪ್ರಗತಿ ಪರಿಶೀಲನ ಸಭೆ:ಅಧಿಕಾರಿಗಳು ಹಾಗೂ ಸದಸ್ಯರು ಗೈರು

ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕಾಗಿದ್ದ ಅಧಿಕಾರಿಗಳು ಹಾಗೂ ಸದಸ್ಯರು ಗೈರಾಗಿರೋದು ಸಭೆಯಲ್ಲಿ ಎದ್ದು ಕಾಣುತಿತ್ತು. ಪ್ರತಿ ಸಭೆಯಲ್ಲಿ ಅಧಿಕಾರಿಗಳಿಂದ ತುಂಬಿರುತ್ತಿದ್ದ ಚೇರ್​ಗಳು ಇಂದಿನ ಸಭೆಯಲ್ಲಿ ಖಾಲಿ ಖಾಲಿ ಹೊಡೆಯುತಿದ್ದವು. ಸಭೆಗೆ ಬಾರದ ಅಧಿಕಾರಿಗಳನ್ನು ಗುರಿಯಾಗಿಸಿ ಕ್ರಮಕ್ಕೆ ಮುಂದಾಗಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಪಂ ಸಿಇಒ ಸತ್ಯಭಾಮ ಅವರು ತಾಕೀತು ಮಾಡಿದರು.

ಜನ ಸಾಮಾನ್ಯರ ಧ್ವನಿಯಾಗಿ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕಾಗಿದ್ದ ಜಿಪಂ ಸದಸ್ಯರು ಕೂಡ ಸಭೆಯತ್ತ ಸುಳಿಯದೆ ಇರುವುದು ನಾಚಿಕೆಗೇಡಿನ ಸಂಗತಿ.

ABOUT THE AUTHOR

...view details