ಚಿತ್ರದುರ್ಗ:ವಿದ್ಯುತ್ ತಗುಲಿ ಮಂಗಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಳ್ಳಕೆರೆ ನಗರದ ಹಳೇ ಟೌನ್ನಲ್ಲಿ ನಡೆದಿದೆ.
ಒಂದು ವಿದ್ಯುತ್ ಕಂಬದಿಂದ ಮತ್ತೊಂದು ಕಬ್ಬಕ್ಕೆ ಜಿಗಿಯುವಾಗ ವಿದ್ಯುತ್ ತಂತಿ ತಗುಲಿ ಎರಡು ಕೋತಿಗಳು ಮೃತಪಟ್ಟಿವೆ. ಕಣ್ಣಮುಂದೆ ಕೋತಿಗಳು ಜೀವ ಬಿಡುತ್ತಿದ್ದರೂ, ಏನೂ ಮಾಡಲಾಗದೆ ಸಾರ್ವಜನಿಕರು ಮರುಕ ವ್ಯಕ್ತಪಡಿಸಿದರು.
ಕೋತಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಸಾರ್ವಜನಿಕರು ಇದನ್ನೂಓದಿ: ಚಿತ್ರದುರ್ಗ: ಅತ್ಯಾಚಾರ ಸಂತ್ರಸ್ತೆ ಮನೆಗೆ ಶಾಂತವೀರ ಸ್ವಾಮೀಜಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ
ಮೃತಪಟ್ಟ ಕೋತಿಗಳಿಗೆ ಸಾರ್ವಜನಿಕರು ನಗರಸಭೆ ಸಿಬ್ಬಂದಿ ಜೊತೆಗೂಡಿ ಪೂಜೆ ಸಲ್ಲಿಸಿ, ನಗರದಲ್ಲಿ ಮೆರವಣಿಗೆ ಮಾಡುವ ಮೂಲಕ ಶಾಸ್ತ್ರೋಕ್ತ ಅಂತ್ಯಕ್ರಿಯೆ ಮಾಡಿದ್ದಾರೆ. ಮನುಷ್ಯರ ರೀತಿಯೇ ಕೋತಿಗಳಿಗೆ ಮೂರನೇ ದಿನದ ಕಾರ್ಯ ಮಾಡಲಾಗುವುದು ಎಂದು ಸ್ಥಳೀಯ ನಿವಾಸಿ ದುರ್ಗಪ್ಪ ತಿಳಿಸಿದ್ದಾರೆ.