ಚಿತ್ರದುರ್ಗ:ಪ್ರಧಾನಿ ಮೋದಿ, ಅಮಿತ್ ಶಾ ಬೆಂಬಲ ಇಲ್ಲದೆ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಲು ಸಾಧ್ಯವಿಲ್ಲ. ಅವರ ಪ್ರಭಾವದಿಂದ ಯತ್ನಾಳ್ ವಿರುದ್ಧ ಕ್ರಮ ಆಗಿಲ್ಲ. ನಾನೇ ಸಿಎಂ ಆಗುತ್ತೇನೆ ಎಂದು ಅವರು ನನ್ನ ಬಳಿ ಹೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ಮೋದಿ, ಶಾ ಬೆಂಬಲವಿಲ್ಲದೆ ಯತ್ನಾಳ್ ಹೇಳಿಕೆ ನೀಡಲು ಸಾಧ್ಯವಿಲ್ಲ: ಹೊರಟ್ಟಿ
ಬಿಜೆಪಿ ಶಾಸಕ ಯತ್ನಾಳ್ಗೆ ಮೋದಿ, ಶಾ ಬೆಂಬಲವಿದೆ. ಈ ಹಿನ್ನೆಲೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಎಸ್‌ವೈ ಅವರನ್ನು ಅಧಿಕಾರದಿಂದ ಇಳಿಸುತ್ತಾರೋ ಇಲ್ವೋ ಗೊತ್ತಿಲ್ಲ, ಅವರ ಬಳಿಕ ಯತ್ನಾಳ್ ಸಿಎಂ ಆಗುತ್ತಾರೋ ಗೊತ್ತಿಲ್ಲ. ಆದರೆ ಕೇಂದ್ರದ ಎಲ್ಲಾ ನಾಯಕರು ಯತ್ನಾಳ್ ಪರವಾಗಿದ್ದು, ಮೂರು ಪಕ್ಷದ ಹೈಕಮಾಂಡ್‌ಗಳಲ್ಲಿ ಬಿಜೆಪಿ ಬಲಿಷ್ಠವಾಗಿದ್ದರಿಂದ ಮೋದಿ ಎದುರು ಯಾರೂ ನಿಲ್ಲೋಕಾಗೋದಿಲ್ಲ. ಇಂಥ ಸಂದರ್ಭದಲ್ಲಿ ಯತ್ನಾಳ್ ನಾನೇ ಮುಂದಿನ ಸಿಎಂ ಅಂತಿದ್ದು, ಅವರ ವಿರುದ್ಧ ಕ್ರಮ ಆಗಿಲ್ಲ ಅಂದರೆ ಹೈಕಮಾಂಡ್ ಅವರ ಪರವಿದೆ ಎಂದರು.
ಉಪಚುನಾವಣೆ ಬಗ್ಗೆ ಮಾತನಾಡುತ್ತಾ, ಚುನಾವಣೆಗಳಲ್ಲಿ ಎಲ್ಲಾ ಪಕ್ಷದವರು ಹಣ, ಮದ್ಯ ಹಂಚುತ್ತಿದ್ದು, ಮತದಾರರು ಎಲ್ಲ ಕಡೆಗಳಿಂದಲೂ ತೆಗೆದುಕೊಂಡು ಒಬ್ಬರಿಗೆ ಟೋಪಿ ಹಾಕ್ತಿದ್ದಾರೆ. ದುಡ್ಡು ಕೊಟ್ಟು ಗೆದ್ದವರು ಅವಧಿ ಪೂರ್ಣ ಕೆಲಸ ಮಾಡದಿರುವುದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.