ಕರ್ನಾಟಕ

karnataka

ETV Bharat / state

ಮೋದಿ 1000 ವೋಲ್ಟ್​ನ ಹಾಲೋಜನ್ ಲೈಟ್ ಇದ್ದಂತೆ.. ನಳೀನ್‌ ಕುಮಾರ್ - naleen kumar react to media

ಮೋದಿ ಜೀರೋ ಕ್ಯಾಂಡಲ್ ಬಲ್ಬ್ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖರ್ಗೆ ರಾಜಕೀಯವಾಗಿ ಆರಿದ ದೀಪ. ಅವರೀಗ ಕತ್ತಲಿನಲ್ಲಿದ್ದಾರೆ, ಅವರಿಗೆ ಕಾಂಗ್ರೆಸ್​ನವರು ಕನಿಷ್ಠ ರಾಜ್ಯಸಭೆಗೂ ಕಳುಹಿಸಲಿಲ್ಲ. ಆ ದುಃಖದಲ್ಲಿ ಮೋದಿ ಬಗ್ಗೆ ಹಾಗೇ ಹೇಳಿದ್ದಾರೆ ಎಂದು ಟೀಕಿಸಿದರು.

naleen kumar
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್

By

Published : Feb 9, 2020, 2:29 PM IST

ಚಿತ್ರದುರ್ಗ: ಪ್ರಧಾನಿ ಮೋದಿಯವರು 1000 ವೋಲ್ಟ್ ಹಾಲೋಜನ್ ಲೈಟ್ ಇದ್ದ ಹಾಗೆ. ಅವರು ಇಡೀ ಜಗತ್ತಿಗೆ ಬೆಳಕು ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್

ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿಜೆಪಿ ಪದಗ್ರಹಣ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮೋದಿ ಜೀರೋ ಕ್ಯಾಂಡಲ್ ಬಲ್ಬ್ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖರ್ಗೆ ರಾಜಕೀಯವಾಗಿ ಆರಿದ ದೀಪ. ಅವರೀಗ ಕತ್ತಲಿನಲ್ಲಿದ್ದಾರೆ, ಅವರಿಗೆ ಕಾಂಗ್ರೆಸ್​ನವರು ಕನಿಷ್ಠ ರಾಜ್ಯಸಭೆಗೂ ಕಳುಹಿಸಲಿಲ್ಲ. ಆ ದುಃಖದಲ್ಲಿ ಮೋದಿ ಬಗ್ಗೆ ಹಾಗೇ ಹೇಳಿದ್ದಾರೆ ಎಂದು ಟೀಕಿಸಿದರು. ಸಿಎಂ ಹೈಕಮಾಂಡ್ ಕಂಟ್ರೋಲ್​ನಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ನಮಗೆ ಸಿದ್ದರಾಮಯ್ಯ ಅವರನ್ನು ನೋಡಿದ್ರೆ ಅಯ್ಯೋ ಅನ್ನಿಸುತ್ತಿದೆ. ಅವರ ಪಾರ್ಟಿ ಈ ಸ್ಥಿತಿಗೆ ಬರಬಾರದಾಗಿತ್ತು ಎಂದು ವ್ಯಂಗ್ಯವಾಡಿದರು.

ಅವರ ಪಾರ್ಟಿಗೆ ರಾಜ್ಯಾಧ್ಯಕ್ಷರಿಲ್ಲದೇ ಆರು ತಿಂಗಳಾಗಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆರು ತಿಂಗಳಾಯ್ತು. ಕಾಂಗ್ರೆಸ್​ನಲ್ಲಿ ಅವರ ಸ್ಥಿತಿ ಹೇಳಿಕೊಳ್ಳಲಾಗದೆ ಸಿಎಂ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದರು.

ABOUT THE AUTHOR

...view details