ಚಿತ್ರದುರ್ಗ:ಕೊರೊನಾ ಭೀತಿಯಿಂದ ಕಳೆದ 8 ತಿಂಗಳಿಂದ ಬೀಗ ಹಾಕಿದ್ದ ಶಾಲಾ-ಕಾಲೇಜುಗಳು ಇಂದು ಪುನರಾರಂಭಗೊಳ್ಳುತ್ತಿರುವ ಸಂದರ್ಭದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಶಾಲೆಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ಅವರನ್ನು ಶಾಲಾ-ಕಾಲೇಜುಗಳಿಗೆ ಬರಮಾಡಿಕೊಂಡರು.
ಶಾಲಾ-ಕಾಲೇಜು ಪುನಾರಂಭ: ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ
ಹೊಸ ವರ್ಷಾಚರಣೆಯೊಂದಿಗೆ ಶಾಸಕ ತಿಪ್ಪಾರೆಡ್ಡಿ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿ ಆತ್ಮಸ್ಥೈರ್ಯ ತುಂಬಿದರು.
06 ರಿಂದ 09ನೇ ತರಗತಿಯವರಿಗೆ ವಿದ್ಯಾಗಮ,10 ಹಾಗೂ 12ನೇ ತರಗತಿಗಳಿಗೆ ಇಂದಿನಿಂದ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕೊರೊನಾ ನಿಯಮಗಳ ಪಾಲನೆಯೊಂದಿಗೆ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಕೋಟೆನಾಡಿನ ಶಾಲಾ ಕಾಲೇಜುಗಳಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಹೊಸ ವರ್ಷಾಚರಣೆಯೊಂದಿಗೆ ಶಾಸಕ ತಿಪ್ಪಾರೆಡ್ಡಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಸ್ವಾಗತಿಸಿ ಆತ್ಮಸ್ಥೈರ್ಯ ತುಂಬಿದರು.
ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸ್ಯಾನಿಟೈಸರ್ ಬಳಕೆಯ ಬಗ್ಗೆ ಹಾಗೂ ಕಡ್ಡಾಯ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ಸರ್ಕಾರದ ಮಾರ್ಗಸೂಚಿಗಳ ಪಾಲನೆಯೊಂದಿಗೆ ಜಿಲ್ಲೆಯ 486 ಪ್ರೌಢಶಾಲೆಗಳು, 800 ಕ್ಕೂ ಅಧಿಕ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 40 ಕ್ಕೂ ಅಧಿಕ ಪಿಯು ಕಾಲೇಜುಗಳ ತರಗತಿಗಳು ಇಂದಿನಿಂದ ಆರಂಭಗೊಂಡಿವೆ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶಾಸಕ ತಿಪ್ಪಾರೆಡ್ಡಿ ತೆರಳಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಬರ ಮಾಡಿಕೊಂಡರು.