ಚಿತ್ರದುರ್ಗ:ವಾಣಿ ವಿಲಾಸ ಸಾಗರದ ನೀರಿನ ಸಲುವಾಗಿ ಇಬ್ಬರು ಶಾಸಕರ ನಡುವೆ ಇದೀಗ ಶೀತಲ ಸಮರ ಏರ್ಪಟ್ಟಿದೆ. ಚಳ್ಳಕೆರೆ ತಾಲೂಕಿನ ಕೆಲ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಈ ಹಿಂದೆ ವಿವಿ ಸಾಗರದಿಂದ ವೇದಾವತಿ ನದಿಗೆ 0.25 ಟಿಎಂಸಿ ನೀರನ್ನು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೋಳಿ ನೀರು ಹರಿಸಲು ಚಾಲನೆ ನೀಡಿದ್ದರು. ಆದರೀಗ ಅದೇ ಪಕ್ಷದ ಶಾಸಕಿ ನೀರನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ನೀರು ಚಳ್ಳಕೆರೆಯ ಕೆಲ ಹಳ್ಳಿಗಳ ಬ್ಯಾರೇಜ್ಗಳಿಗೆ ತಲುಪುವ ಮುನ್ನವೇ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನೀರು ನಿಲ್ಲಿಸುವ ಮೂಲಕ, ಚಳ್ಳಕೆರೆ ಕೈ ಶಾಸಕ ರಘು ಮೂರ್ತಿಯವರ ಕೆಂಗ್ಗಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಇದರಿಂದ ಚಳ್ಳಕೆರೆಗೆ ನೀರು ಹರಿಸಲು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಅನುಮತಿ ಪಡೆಯಬೇಕಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.