ಚಿತ್ರದುರ್ಗ: ಕುಡಿಯುವ ನೀರಿಗೆ ಗ್ರಾಮದ ಮಹಿಳೆಯರು ಮಕ್ಕಳು ಕಿಲೋಮೀಟರ್‌ಗಟ್ಟಲೆ ಹೋಗಬೇಕಿರುವ ಬಗ್ಗೆ ಈಟಿವಿ ಭಾರತದಲ್ಲಿ "ಚಿತ್ರದುರ್ಗ: ಗಡಿ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ" ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡಿತ್ತು. ಈ ಸುದ್ದಿ ಗಮನಿಸಿದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಶಾಸಕರ ಅನುದಾನದಲ್ಲಿ ಬೋರ್ ವೆಲ್ ಕೊರೆಯಿಸಿ ನೀರಿನ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಗ್ರಾಮದಲ್ಲಿ ಬೋರ್ವೆಲ್ ಕೊರೆಸಿ ಜನರ ನೀರಿನ ದಾಹ ತಣಿಸಿದ ಶಾಸಕಿ - ಗ್ರಾಮದಲ್ಲಿ ಬೋರ್ವೆಲ್ ಕೊರಸಿ ಜನರ ನೀರಿನ ದಾಹ ತಿರಿಸಿದ ಶಾಸಕಿ
ಬೇಸಿಗೆ ಬಂದರೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸಾಮಾನ್ಯವಾಗಿ ಇರುತ್ತದೆ. ಸಾವಿರಾರು ಅಡಿ ಆಳ ಬೋರ್ ಕೊರೆದರೂ ಹನಿ ನೀರು ಬೀಳುವುದು ಕಷ್ಟ. ಇಂತಹ ಸಮಯದಲ್ಲಿ ಹಿರಿಯೂರು ತಾಲೂಕಿನ ಹರಿಯಬ್ಬೆ ಪಾಳ್ಯದಲ್ಲಿ 800 ಅಡಿಗೆ 3 ಇಂಚು ನೀರು ಸಿಕ್ಕಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಗ್ರಾಮದಲ್ಲಿ ಬೋರ್ವೆಲ್ ಕೊರಸಿ ಜನರ ನೀರಿನ ದಾಹ ತಿರಿಸಿದ ಶಾಸಕಿ
ಬೇಸಿಗೆ ಬಂದರೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅಭಾವ ತಲೆದೋರುತ್ತೆ. ಸಾವಿರಾರು ಅಡಿ ಬೋರ್ ಕೊರೆದರೂ ಹನಿನೀರು ಬೀಳುವುದು ಕಷ್ಟ. ಇಂತಹ ಸಮಯದಲ್ಲಿ ಹಿರಿಯೂರು ತಾಲೂಕಿನ ಹರಿಯಬ್ಬೆ ಪಾಳ್ಯದಲ್ಲಿ 800 ಅಡಿಗೆ 3 ಇಂಚು ನೀರು ಸಿಕ್ಕಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ತಮ್ಮೂರಿನ ನೀರಿನ ದಾಹ ನೀಗಿಸಿದ ಶಾಸಕಿಗೆ ಗ್ರಾಮದ ಜನರು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ: ಗಡಿ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ